’ಫನ್ನಿ ಖಾನ್' ಬಿಡುಗಡೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ಬಾಲಿವುಡ್ ನಟ ಅನಿಲ್ ಕಪೂರ್ ಮುಂದಿನ ಚಿತ್ರ ’ಫನ್ನಿ ಖಾನ್’ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Published On :
ನವದೆಹಲಿ: ಬಾಲಿವುಡ್ ನಟ ಅನಿಲ್ ಕಪೂರ್ ಮುಂದಿನ ಚಿತ್ರ ’ಫನ್ನಿ ಖಾನ್’ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಚಲನಚಿತ್ರದ ವಿತರಣೆ ಹಕ್ಕುಗಳಲ್ಲಿ ವಿಆವಾದ ಉಂತಾಗಿದ್ದ ಕಾರಣ ಚಿತ್ರ ನಿರ್ಮಾಪಕ ವಾಶು ಭಗ್ನಾನಿ ಚಿತ್ರ ಬಿಡುಗಡೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿರುವ ಕಾರಣ ನಿಗದಿಯಂತೆ ಚಿತ್ರವು ಇದೇ ಆಗಸ್ಟ್ 3ರಂದು ತೆರೆಗೆ ಬರಲಿದೆ.
ಚಿತ್ರದಲ್ಲಿ ನಟ ಅನಿಲ್ ಕಪೂರ್ ಆರ್ಕೆಸ್ಟ್ರಾ ಸಿಂಗರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಗಾಯಕ ಮಹಮದ್ ರಫಿ ಹಾಗೂ ಶಮ್ಮಿ ಕಪೂರ್ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಳ್ಳುವ ಅನಿಲ್ ತಾವು ರಫಿ ಹಾಗೂ ಶಮ್ಮಿಯನ್ನು ದೇವರೆಂದು ಪೂಜಿಸುತ್ತಾರೆ ಮತ್ತು ಅವರ ಹಾಡುಗಳನ್ನು ಹಾಡುತ್ತಾರೆ.
ಸಂಗೀತ ಪ್ರಧಾನವಾದ ಈ ಚಿತ್ರದಲ್ಲಿ ಅನಿಲ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರು ಗಾಯಕರಾಗುವ ಮೂಲಕ ತನ್ನ ಮಗಳ ಕನಸನ್ನು ನೆರವೇರಿಸಲು ಬಯಸುವ ಭಾವನಾತ್ಮಕ ಪಾತ್ರದಲ್ಲಿ ನಟಿಸಿದ್ದಾರೆ.
ಅತುಲ್ ಮಂಜ್ರೇಕರ್ ಅವರ ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗು ರಾಜ್ ಕುಮಾರ್ ರಾವ್ ಸೇರಿ ಅನೇಕ ನಟರ ಅಭಿನಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtAishwarya Rai Bachchanಅನಿಲ್ ಕಪೂರ್Anil Kapoorಐಶ್ವರ್ಯಾ ರೈ ಬಚ್ಚನ್ಸರ್ವೋಚ್ಚ ನ್ಯಾಯಾಲಯFanney Khanಫನ್ನಿ ಖಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


