ಎರಡನೇ ಬಾರಿ ಅವಳಿ ಮಕ್ಕಳನ್ನು ಹೆತ್ತ ಸೆಲಿನಾ ಜೇಟ್ಲಿ ಹೇಳಿದ ಕಹಿ ಸುದ್ದಿ
ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಇತ್ತೀಚೆಗೆ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ಅರ್ತರ್ ಜೇಟ್ಲಿ ಹಾಗ್ ಮತ್ತು ....

Published On :
ನವದೆಹಲಿ: ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಇತ್ತೀಚೆಗೆ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ಅರ್ತರ್ ಜೇಟ್ಲಿ ಹಾಗ್ ಮತ್ತು ಶಮ್ಶರ್ ಜೇಟ್ಲಿ ಹಾಗ್ ಎಂದು ನಾಮಕರಣ ಕೂಡ ಮಾಡಿದ್ದರು. ಆದರೆ ಹೃದಯ ಸಂಬಂಧಿ ಕಾಯಿಲೆಯಿಂದ ಅವರ ಶಶ್ಮರ್ ಜೇಟ್ಲಿ ಹಾಗ್ ನಿಧನ ಹೊಂದಿದೆ.
ಸೆಲಿನಾ ತಮ್ಮ ಫೇಸ್ ಬುಕ್ ಪುಟದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು ಅದನ್ನು ದಸರಾದ ಸಿಹಿ, ಸಂತೋಷದ ಸಂದರ್ಭದಲ್ಲಿ ಕಹಿ ಸುದ್ದಿ ಎಂದು ಬಣ್ಣಿಸಿದ್ದಾರೆ.
ಸೆಲಿನಾ ಜೇಟ್ಲಿ ದುಬೈಯಲ್ಲಿ ಕಳೆದ ತಿಂಗಳು ಹತ್ತನೇ ತಾರೀಖಿನಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಸೆಲಿನಾ ಜೇಟ್ಲಿ ಫೇಸ್ ಬುಕ್ ನಲ್ಲಿ ಬಹಳ ಭಾವನಾತ್ಮಕವಾಗಿ ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ತಮ್ಮ ಅಗಲಿದ ಮಗನನ್ನು ಅವನ ಭಾಗವಾಗಿರುವ ಇನ್ನೊಂದು ಮಗು ಅರ್ಥರ್ ಜೇಟ್ಲಿಯಲ್ಲಿ ಕಾಣುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಸೆಲಿನಾ ತಮ್ಮ ತಂದೆಯನ್ನು ಕೂಡ ಕಳೆದುಕೊಂಡಿದ್ದರು. ಕಳೆದ ಜುಲೈಯಿಂದ ಈ ಎರಡು ತಿಂಗಳು ತಮ್ಮ ಜೀವನ ಪ್ರಕ್ಷುಬ್ಧವಾಗಿತ್ತು ಎಂದು ಬಣ್ಣಿಸಿದ್ದಾರೆ.
ನಟಿ ಸೆಲಿನಾ ಜೇಟ್ಲಿ ತಮ್ಮ ಹೊಟೇಲ್ ಉದ್ಯಮಿ ಪೀಟರ್ ಹಾಗ್ ಜೊತೆ ದುಬೈಯಲ್ಲಿ ವಾಸಿಸುತ್ತಿದ್ದು ಈಗಾಗಲೇ ಅವರಿಗೆ 5 ವರ್ಷದ ಅವಳಿ ಮಕ್ಕಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


