ಬಾಲಿವುಡ್

ಆಧುನಿಕ ಉನ್ನತ ತಂತ್ರಜ್ಞಾನದೊಂದಿಗೆ ಆರ್ ಕೆ ಸ್ಟುಡಿಯೊ ಮರು ನಿರ್ಮಾಣ: ರಿಶಿ ಕಪೂರ್

ಬಾಲಿವುಡ್ ನ ದಂತಕಥೆ ರಾಜ್ ಕಪೂರ್ ಸ್ಥಾಪಿಸಿದ್ದ, ಅಗ್ನಿ ಅವಘಡದಲ್ಲಿ ಸುಟ್ಟುಹೋಗಿದ್ದ ಸಾಂಪ್ರದಾಯಿಕ ....

ಆಧುನಿಕ ಉನ್ನತ ತಂತ್ರಜ್ಞಾನದೊಂದಿಗೆ ಆರ್ ಕೆ ಸ್ಟುಡಿಯೊ ಮರು ನಿರ್ಮಾಣ: ರಿಶಿ ಕಪೂರ್
ಅಗ್ನಿ ಅವಘಡಕ್ಕೆ ತುತ್ತಾದ ಸ್ಟುಡಿಯೊ
Published On :
ಮುಂಬೈ: ಬಾಲಿವುಡ್ ನ ದಂತಕಥೆ ರಾಜ್ ಕಪೂರ್ ಸ್ಥಾಪಿಸಿದ್ದ, ಅಗ್ನಿ ಅವಘಡದಲ್ಲಿ ಸುಟ್ಟುಹೋಗಿದ್ದ ಸಾಂಪ್ರದಾಯಿಕ ಮತ್ತು ಪ್ರಸಿದ್ಧ ಆರ್ ಕೆ ಫಿಲ್ಮ್ಸ್ ಮತ್ತು ಸ್ಟುಡಿಯೊವನ್ನು ಮರು ನಿರ್ಮಿಸಲಾಗುವುದು. ಆಧುನಿಕ ಉನ್ನತ ಮಟ್ಟದ ತಂತ್ರಜ್ಞಾನ ಶೈಲಿಯಲ್ಲಿ ಸ್ಟುಡಿಯೊ ನಿರ್ಮಾಣ ಮಾಡಲಾಗುವುದು ಎಂದು ಬಾಲಿವುಡ್ ನ ಹಿರಿಯ ನಟ ರಿಶಿ ಕಪೂರ್ ತಿಳಿಸಿದ್ದಾರೆ.
ಪ್ರಸಿದ್ಧ ಸ್ಟುಡಿಯೊ ಅಗ್ನಿ ಅವಘಡಕ್ಕೆ ತುತ್ತಾಗಿ ಹಾಳಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಮೊನ್ನೆ 16ರಂದು ಚೆಂಬೂರ್ ನಲ್ಲಿ ನಡೆದ ಅಗ್ನಿ ಅವಘಡದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
65 ವರ್ಷದ ನಟ ರಿಶಿ ಕಪೂರ್, ಸ್ಟುಡಿಯೊ ಉದ್ಘಾಟನೆ ಸಂದರ್ಭದ ಕಪ್ಪು ಬಿಳುಪು ಚಿತ್ರವನ್ನು ಕೂಡ ಶೇರ್ ಮಾಡಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ರಾಜ್ ಕಪೂರ್, ನರ್ಗಿಸ್, ಪೃಥ್ವಿರಾಜ್ ಕಪೂರ್ ಮತ್ತು ಲೀಲಾ ಚಿಟ್ನಿಸ್ ಅಭಿನಯದ ಅವಾರಾ ಚಿತ್ರದೊಂದಿಗೆ ಸ್ಟುಡಿಯೊ ಉದ್ಘಾಟನೆಗೊಂಡಿತ್ತು.
1950ರಲ್ಲಿ ಆರ್ ಕೆ ಸ್ಟುಡಿಯೊ ಅವಾರಾ ಚಿತ್ರದೊಂದಿಗೆ ದಸರಾ ಸಂದರ್ಭದಲ್ಲಿ ಉದ್ಘಾಟನೆಗೆ ಸಿದ್ಧವಾಗಿತ್ತು. ಚಿತ್ರದ ಡ್ರೀಮ್ ಸೀಕ್ವೆನ್ಸ್ ನ್ನು ಚಿತ್ರಿಸಲಾಗಿತ್ತು ಎಂದು ರಿಶಿ ಕಪೂರ್ ನೆನಪು ಮಾಡಿಕೊಂಡಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸ್ ಸೀಸನ್ 2 ಇದೇ ಸ್ಟುಡಿಯೊದಲ್ಲಿ ನಡೆಯುತ್ತಿತ್ತು. ಅಗ್ನಿ ಅವಘಡ ಸಂಭವಿಸಿದ ದಿನ ರಿಯಾಲಿಟಿ ಶೋ ಶೂಟಿಂಗ್ ಇರಲಿಲ್ಲ.
ಈ ಸ್ಟುಡಿಯೊದಲ್ಲಿ ಹಿಂದಿಯ ಅನೇಕ ಪ್ರಮುಖ ಚಿತ್ರಗಳ ಚಿತ್ರೀಕರಣ ನಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.