ದುಬೈಯಲ್ಲಿ ಡ್ರೈವಿಂಗ್ ಶಾಲೆ ಉದ್ಘಾಟಿಸಿದ ಸಲ್ಮಾನ್ ಖಾನ್; ಟ್ವಿಟ್ಟರ್ ನಲ್ಲಿ ತಮಾಷೆ
ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ದುಬೈಯಲ್ಲಿ ಡ್ರೈವಿಂಗ್ ಶಾಲೆಯೊಂದನ್ನು ಉದ್ಘಾಟಿಸಿದ್ದರು....

Published On :
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ದುಬೈಯಲ್ಲಿ ಡ್ರೈವಿಂಗ್ ಶಾಲೆಯೊಂದನ್ನು ಉದ್ಘಾಟಿಸಿದ್ದರು. ಇದಕ್ಕೆ ಅನೇಕ ಟ್ವೀಟಿಗರು ಟ್ವೀಟ್ ಮಾಡಿ ಸಲ್ಮಾನ್ ರನ್ನು ಟ್ರಾಲ್ ಮಾಡಿದ್ದಾರೆ.
2002ರಲ್ಲಿ ಸಲ್ಮಾನ್ ಖಾನ್ ಮುಂಬೈಯಲ್ಲಿ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ಮೃತಪಟ್ಟಿದ್ದರು. 2015ರ ಡಿಸೆಂಬರ್ ನಲ್ಲಿ ಮುಂಬೈ ಹೈಕೋರ್ಟ್ ಅವರ ವಿರುದ್ಧದ ಕೇಸನ್ನು ಖುಲಾಸೆಗೊಳಿಸಿತ್ತು.
ಈ ಘಟನೆ ನಡೆದು ಇಷ್ಟು ವರ್ಷಗಳ ಮೇಲಾದರೂ ಜನರು ಮಾತ್ರ ಮರೆತಿಲ್ಲ. ಸಲ್ಮಾನ್ ರನ್ನು ವ್ಯಂಗ್ಯ ಮಾಡಿ, ತಮಾಷೆ ಮಾಡಿ ಬರೆದ ಟ್ವೀಟ್ ಗಳೇ ಅಧಿಕವಾಗಿವೆ.
ಸಲ್ಮಾನ್ ಖಾನ್ ಮುಂದೆ ಡ್ರೈವಿಂಗ್ ಶಾಲೆಗೆ ಡಿಕ್ಕಿ ಹೊಡೆಯುವುದರಲ್ಲಿದ್ದಾರೆ ಎಂದು ಒಬ್ಬರು, ಇನ್ನೊಬ್ಬರು ರಾಹುಲ್ ಗಾಂಧಿಯವರ ಕೃತಕ ಬುದ್ಧಿವಂತಿಕೆಯ ಭಾಷಣ, ಸಲ್ಮಾನ್ ಖಾನ್ ಡ್ರೈವಿಂಗ್ ಶಾಲೆಯನ್ನು ಉದ್ಘಾಟಿಸುವುದು, ಕಿಮ್ ಜಾಂಗ್ ಅನ್ ಪ್ರಜಾಪ್ರಭುತ್ವ ಬಗ್ಗೆ ಮಾತನಾಡುವುದಕ್ಕೆ ಕಾಯುತ್ತಿದ್ದೇವೆ ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಡ್ರೈವಿಂಗ್ ಶಾಲೆ ತೆರೆಯುವುದು, ಅಜಯ್ ದೇವಗನ್, ಸನ್ನಿ ಡಿಯೊಲ್ ಡ್ಯಾನ್ಸ್ ಶಾಲೆ ಆರಂಭಿಸುವುದು, ತುಷಾರ್ ಕಪೂರ್ ಮತ್ತು ಉದಯ್ ಚೋಪ್ರಾ ನಟನಾ ಶಾಲೆ ಆರಂಭಿಸುವುದು ನೋಡಲು ಚಂದ ಎಂದು ಕೆಲವರು ಟ್ವೀಟ್ ಮಾಡಿದರೆ ಇನ್ನೊಬ್ಬರು ಗುರ್ಮೀತ್ ರಾಮ್ ರಹಿಂ ಮಹಿಳೆಯರ ಸುರಕ್ಷತಾ ಕೇಂದ್ರ ತೆರೆಯುತ್ತಾರೆ ಎಂದು ಬರೆದಿದ್ದಾರೆ.
Rahul Gandhi is giving a speech on AI
Salman Khan inaugurating driving school.
Waiting for kim jong un to speak about democracy.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


