"ಪದ್ಮಾವತಿ"ಗಾಗಿ ರಣ್ ವೀರ್ ಸಿಂಗ್ ಗೆ 24 ಬಾರಿ ಕಪಾಳ ಮೋಕ್ಷ!
ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ತಮ್ಮ ನೂತನ ಚಿತ್ರ ಪದ್ಮಾವತಿಗಾಗಿ ಬರೊಬ್ಬರಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರಂತೆ.

Published On :
ಮುಂಬೈ: ಖ್ಯಾತ ಬಾಲಿವುಡ್ ನಟ ರಣ್ ವೀರ್ ಸಿಂಗ್ ತಮ್ಮ ನೂತನ ಚಿತ್ರ ಪದ್ಮಾವತಿಗಾಗಿ ಬರೊಬ್ಬರಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರಂತೆ.
ಹೌದು...ರಾಜಸ್ತಾನದ ರಾಣಿ ಪದ್ಮಾವತಿ ಅವರ ಐತಿಹಾಸಿಕ ಕಥಾಹಂದರವುಳ್ಳ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಚಿತ್ರೀಕರಣದ ವೇಳೆ ನಟ ರಣ್ ವೀರ್ ಸಿಂಗ್ 24 ಬಾರಿ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಚಿತ್ರದ ಸನ್ನಿವೇಶವೊಂದರಲ್ಲಿ ಖ್ಯಾತ ಹಿರಿಯ ನಟ ರಝಾ ಮುರಾದ್ ಅವರಿಂದ ರಣ್ ವೀರ್ ಸಿಂಗ್ ಕಪಾಳಕ್ಕೆ ಹೊಡೆಸಿಕೊಳ್ಳಬೇಕು. ಆದರೆ ಈ ಸನ್ನಿವೇಶ ಚಿತ್ರಕರಣದ ವೇಳೆ ಸಾಕಷ್ಟು ಟೇಕ್ ಗಳ ಬಳಿಕವೂ ನಿರ್ದೇಶಕ ಬನ್ಸಾಲಿ ತೃಪ್ತರಾಗಿರಲಿಲ್ಲ. ಸನ್ನಿವೇಶ ಅವರು ಅಂದುಕೊಂಡಂತೆ ಬರಲಿಲ್ಲ ಎಂದು ಪದೇ ಪದೇ ರಿಟೇಕ್ ತೆಗೆದುಕೊಳ್ಳಲು ಹೇಳುತ್ತಿದ್ದಾರೆ.
ಹೀಗೆ ಬನ್ಸಾಲಿ ಹೇಳಿದ್ದು ಬರೊಬ್ಬರಿ 24 ಬಾರಿ..ಅಂದರೆ 24 ಬಾರಿ ರಣ್ ವೀರ್ ಸಿಂಗ್ ಅವರಿಗೆ ನಟ ರಝಾ ಮುರಾದ್ ಅವರು ಕಪಾಳ ಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಸ್ವತಃ ನಟ ರಣ್ ವೀರ್ ಸಿಂಗ್ ಅವರೇ ಬಹಿರಂಗ ಪಡಿಸಿದ್ದು, ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಇದೇ ರಣ್ ವೀರ್ ಸಿಂಗ್ ತಮ್ಮ ಬೇಫಿಕರ್ ಚಿತ್ರದಲ್ಲಿ 21 ಬಾರಿ ಕಪಾಳ ಮೋಕ್ಷ ಮಾಡಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಪದ್ಮಾವತಿಗಾಗಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಬಹುಕೋಟಿ ಬಜೆಟ್ ನ ಈ ಚಿತ್ರದಲ್ಲಿ ನಟ ರಣ್ ವೀರ್ ಸಿಂಗ್ ಸುಲ್ತಾನ್ ಅಲ್ಲಾದಿನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದಾರೆ.
True story!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈBollywoodಬಾಲಿವುಡ್Ranveer SinghSanjay Leela Bhansaliಸಂಜಯ್ ಲೀಲಾ ಬನ್ಸಾಲಿರಣ್ ವೀರ್ ಸಿಂಗ್ಪದ್ಮಾವತಿ ಚಿತ್ರPadmavati Movie
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


