ಬಾಲಿವುಡ್

ನಟಿ ಕಂಗನಾ ವಿರುದ್ಧ ಆದಿತ್ಯ ಪಾಂಚೋಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು!

ಬಾಲಿವುಡ್ ನಟಿ ಕಂಗನಾ ರನೌತ್ ವಿವಾದ ಮುಂದುವರೆದಿದ್ದು, ಹೃತಿಕ್ ರೋಷನ್ ಬಳಿಕ ಇದೀಗ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನಟಿ ಕಂಗನಾ ವಿರುದ್ಧ ಆದಿತ್ಯ ಪಾಂಚೋಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು!
ನಟ ಆದಿತ್ಯಾ ಪಾಂಚೋಲಿ ಮತ್ತು ನಟಿ ಕಂಗನಾ
Published On :
ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ವಿವಾದ ಮುಂದುವರೆದಿದ್ದು, ಹೃತಿಕ್ ರೋಷನ್ ಬಳಿಕ ಇದೀಗ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಹಿಂದೆ ನಟಿ ಕಂಗನಾ ನಟ ಪಾಂಚೋಲಿಯೊಂದಿಗೆ ಸಂಬಂಧ ಹೊಂದಿದ್ದೆ ಎಂದು ಹೇಳಿದ್ದ ಹೇಳಿಕೆ ಹಿನ್ನಲೆಯಲ್ಲಿ ನಟ ಆದಿತ್ಯಾ ಪಾಂಚೋಲಿ ಮತ್ತು ಹಿರಿಯ ನಟಿ ಜರೀನಾ ವಹಾಬ್ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್  ಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಕೇವಲ ಕಂಗನಾ ಮಾತ್ರವಲ್ಲದೇ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವ ಕಂಗನಾ ಸಹೋದರಿ ರಂಗೋಲಿ ವಿರುದ್ಧವೂ ಬಾಲಿವುಡ್ ದಂಪತಿಗಳು ಮೊಕದ್ದಮೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಂಚೋಲಿ ದಂಪತಿ, ಹೌದು ನಾವು ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ತಮ್ಮ ಕುಟುಂಬದ ವಿರುದ್ಧ ಇಲ್ಲ ಸಲ್ಲದ  ಆರೋಪ ಮಾಡುವ ಮೂಲಕ ಕಂಗನಾ ತಮ್ಮ ಕುಟುಂಬ ಮಾನಹಾನಿಗೆ ಯತ್ನಿಸಿದ್ದಾರೆ ಎಂದ ಹೇಳಿದ್ದಾರೆ. 
ಈ ವೇಳೆ ಮಾತನಾಡಿದ ನಟ ಆದಿತ್ಯಾ ಪಂಚೋಲಿ, ಕಂಗನಾ ಮಾಧ್ಯಮವೊಂದರ ಜೊತೆ ಮಾತನಾಡುವಾಗ ತಮ್ಮ ಕುಟುಂಬದ ಕುರಿತು ನಿರಾಧಾರ ಆರೋಪ ಮಾಡಿದ್ದಾರೆ. ಅಲ್ಲದೆ ನನ್ನ ಪತ್ನಿ ಪುತ್ರ, ಪುತ್ರಿಯ ಹೆಸರು  ತೆಗೆದುಕೊಳ್ಳುವ ಮೂಲಕ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಆರೋಪ ಮಾಡುತ್ತಿರುವ ಕಂಗನಾ, ಈ ಕುರಿತು ಸಾಕ್ಷ್ಯಾಧಾರಗಳನ್ನು ನೀಡಲೇಬೇಕು. ನಮ್ಮ ಸಂಯಮಕ್ಕೂ ಒಂದು ಮಿತಿ  ಇರುತ್ತದೆ ಎಂದು ನಟ ಆದಿತ್ಯಾ ಕಿಡಿಕಾರಿದ್ದಾರೆ.
ಇನ್ನು ಈ ಹಿಂದೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಕಂಗನಾ, ತಮ್ಮ ಮತ್ತು ನಟ ಹೃತಿಕ್ ನಡುವಿನ ಸಂಬಂಧದ ಕುರಿತು ಹೇಳಿಕೊಂಡಿದ್ದರು. ಅಲ್ಲದೆ ತಾವು ಬಾಲಿವುಡ್ ಗೆ ಪ್ರವೇಶ ಮಾಡಿದ್ದ ಹೊಸದರಲ್ಲಿ ನಟ  ಪಾಂಚೋಲಿ ತನ್ನೊಂದಿಗೆ ಸಂಬಂಧ ಬೆಳೆಸಿದ್ದ ಎಂದು ಆರೋಪಿಸಿದ್ದರು. ಕಂಗನಾ ಸಹೋದರಿ ರಂಗೋಲಿ ಕೂಡ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಈ ಸುದ್ದಿ ಬೆನ್ನಲ್ಲೇ ಕಂಗನಾಗೆ ಎಚ್ಚರಿಕೆ ನೀಡಿದ್ದ  ಪಾಂಚೋಲಿ ಕುಟುಂಬ ಬಹಿರಂಗ ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.