'ಪದ್ಮಾವತಿ' ಬಗ್ಗೆ ಸೆನ್ಸಾರ್ ಮಂಡಳಿ ನಿರ್ಧರಿಸಲಿ: ಸಂಸತ್ ಸಮಿತಿ ಸಭೆಯಲ್ಲಿ ಅಡ್ವಾಣಿ ಅಭಿಪ್ರಾಯ
ಸಾಕಷ್ಟು ವಿವಾದಕ್ಕೀಡಾಗಿದ್ದ 'ಪದ್ಮಾವತಿ' ಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಬೆಂಬಲ ಸೂಚಿಸಿದ್ದಾರೆ.

Published On :
ನವದೆಹಲಿ: ಸಾಕಷ್ಟು ವಿವಾದಕ್ಕೀಡಾಗಿದ್ದ 'ಪದ್ಮಾವತಿ' ಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಬೆಂಬಲ ಸೂಚಿಸಿದ್ದಾರೆ.
"ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂದಳಿ (ಸಿಬಿಎಫ್ ಸಿ) ತನ್ನ ಕೆಲಸವನ್ನು ಮಾಡಲಿ. ನಿಮಾ ವಿಚಾರವಾಗಿ ಈಗಾಗಲೆ ಬಹಳಷ್ಟು ಮಂದಿ ಬೆಂಬಲಿಸಿದ್ದಾರೆ.ಇನ್ನು ಸಂಸದೀಯ ಸಮಿತಿ ಇದರಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ" ಎಂದಿದ್ದಾರೆ.
'ಪದ್ಮಾವತಿ' ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಕುರಿತಂತೆ ನಿನ್ನೆಯಷ್ಟೇ ಸಂಸದೀಯ ಮಂಡಳಿ ಎದುರು ವಿವರ ನೀಡಿದ್ದರು. ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಷಿ ಸಹ ಸಮಿತಿ ಎದುರು ಹಾಜರಾಗಿದ್ದು ಸಂಸದೀಯ ಸಮಿತಿಯ ನೇತೃತ್ವವನ್ನು ಅನುರಾಗ್ ಠಾಕೂರ್ ವಹಿಸಿದ್ದರು. ಸಮಿತಿಯು ಚಿತ್ರ ನಿರ್ದೇಶಕರಿಗೆ ಡಿಸೆಂಬರ್ 14ರ ಒಳಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಂಸದೀಯ ಸಮಿತಿCensor Boardಸೆನ್ಸಾರ್ ಮಂಡಳಿSanjay Leela Bhansaliparliamentary committeePadmavatiಪದ್ಮಾವತಿBJP leader L K Advaniಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಸಂಜಯ್ ಲೀಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


