ದೀಪಿಕಾ, ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಇನಾಮು ಘೋಷಿಸಿದ ಬಿಜೆಪಿ ನಾಯಕ
ಮೀರತ್ ನ ಕ್ಷತ್ರಿಯ ಸಮುದಾಯದ ಅಭಿಷೇಕ್ ಠಾಕೂರ್ ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ...

Published On :
ಮೀರತ್ ನ ಕ್ಷತ್ರಿಯ ಸಮುದಾಯದ ಅಭಿಷೇಕ್ ಠಾಕೂರ್ ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿದರೆ 5 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದರ ಬೆನ್ನಲ್ಲೇ ಇದೀಗ ಹರ್ಯಾಣದ ಬಿಜೆಪಿ ನಾಯಕರೊಬ್ಬರು ನಾಯಕ ರಣವೀರ್ ಸಿಂಗ್ ಕಾಲು ಮುರಿದವರಿಗೆ ಹಾಗೂ ಇಬ್ಬರ ತಲೆ ಕಡಿದವರಿಗೆ 10 ಕೋಟಿ ಇನಾಮು ನೀಡುವುದಾಗಿ ಘೋಷಿಸಿದ್ದಾರೆ.
ಪದ್ಮಾವತಿ ಸಿನಿಮಾದಲ್ಲಿ ರಾಣಿ ಪದ್ಮಿನಿಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಕ್ಷತ್ರಿಯಾ ಸಮಾಜ್ ದ ಅಭಿಷೇಕ್ ಠಾಕೂರ್ ಸೋಮ್ ಅವರು ದೀಪಿಕಾಗೆ ಬೆದರಿಕೆ ಹಾಕಿದ್ದು ಆಕೆಯ ತಲೆ ಕತ್ತರಿಸಿದರೇ 5 ಕೋಟಿ ರುಪಾಯಿ ಇನಾಮು ಘೋಷಿಸಿದ್ದರು. ಕ್ಷತ್ರಿಯಾ ಸಮಾಜದ ನಾಯಕನನ್ನು ಬೆಂಬಲಿಸಿರುವ ಹರ್ಯಾಣ ಬಿಜೆಪಿ ಪಕ್ಷದ ಮುಖ್ಯ ಮಾಧ್ಯಮ ಸಂಯೋಜಕ ಸೂರಜ್ ಪಾಲ್ ಅಮು ಅವರು ತಾವು 10 ಕೋಟಿ ಇನಾಮು ನೀಡುವುದಾಗಿ ಘೋಷಿಸಿದ್ದಾರೆ.
ಪದ್ಮಾವತಿ ಚಿತ್ರವನ್ನು ನಿಷೇಧಿಸಬೇಕು ಹಾಗೂ ನಟಿ ದೀಪಿಕಾ ಪಡುಕೋಣೆ ದೇಶ ಬಿಟ್ಟು ಹೋಗಬೇಕು, ಇಲ್ಲದಿದ್ದರೇ ಆಕೆಯ ತಲೆಯನ್ನು ಕತ್ತರಿಸಲಾಗುವುದು, ಕ್ಷತ್ರಿಯ ಸಮಾಜದ ಪರವಾಗಿ ಅಭಿಷೇಕ್ ಠಾಕೂರ್ ಸೋಮ್ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Deepika Padukoneದೀಪಿಕಾ ಪಡುಕೋಣೆSanjay Leela Bhansalibeheadedಸಂಜಯ್ ಲೀಲಾ ಬನ್ಸಾಲಿPadmavatiಪದ್ಮಾವತಿತಲೆ ಕತ್ತರಿಸು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


