ಬಾಲಿವುಡ್ ಖಾನ್ ತ್ರಯರ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದ ಬಾಹುಬಲಿ 2
ಬಾಲಿವುಡ್ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ ಖಾನ್ ತ್ರಯರ ಚಿತ್ರಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತಿದ್ದವು. ಇಂದು ಅಂತ ಖಾನ್ ತ್ರಯರ ಚಿತ್ರಗಳನ್ನು...

Published On :
ಬಾಲಿವುಡ್ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ ಖಾನ್ ತ್ರಯರ ಚಿತ್ರಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತಿದ್ದವು. ಇಂದು ಅಂತ ಖಾನ್ ತ್ರಯರ ಚಿತ್ರಗಳನ್ನು ಬಾಹುಬಲಿ 2 ಚಿತ್ರ ಹಿಂದಿಕ್ಕಿದೆ.
ಬಾಲಿವುಡ್ ಅಗ್ರಮಾನ್ಯ ನಟರಾದ ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿದ್ದರು. ಬಾಹುಬಲಿ 2 ಚಿತ್ರ ಬರುವವರೆಗೂ ಖಾನ್ ತ್ರಯರ್ ಆರ್ಭಟ ಜೋರಾಗಿತ್ತು. ಆದರೆ ಇದೀಗ ಬಾಹುಬಲಿ ಅಬ್ಬರಕ್ಕೆ ಖಾನ್ ತ್ರಯರ ದಾಖಲೆಗಳೆಲ್ಲಾ ಧೂಳಿಪಟವಾಗಿದೆ. ಹಿಂದಿ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ದಂಗಲ್ ಚಿತ್ರದ ಗಳಿಕೆಯನ್ನು ಬಾಹುಬಲಿ 2 ಹಿಂದಿಕ್ಕಿದೆ.
ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 387.38 ಕೋಟಿ ಗಳಿಕೆ ಮಾಡುವ ಮೂಲಕ ಹಿಂದಿ ಚಿತ್ರರಂಗದ ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ ಇದೀಗ ಈ ದಾಖಲೆಯನ್ನು ಪ್ರಭಾಸ್ ನಟನೆಯ ಬಾಹುಬಲಿ 2 ಚಿತ್ರ ಹಿಂದಿಕ್ಕಿದೆ. 14 ದಿನಕ್ಕೆ ಸರಿಸುಮಾರು 400 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.
ಕಳೆದ ಏಪ್ರಿಲ್ 28ರಂದು ವಿಶ್ವದಾದ್ಯಂತ 9000 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ 2 ಚಿತ್ರ 14 ದಿನಕ್ಕೆ ವಿಶ್ವದಾದ್ಯಂತ 1250 ಕೋಟಿ ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಗಳಿಕೆ ಮಾಡಿದ ಮೊದಲ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ.
ಇಂದು ಬಾಲಿವುಡ್ ನಲ್ಲಿ ಎರಡು ಹಿಂದಿ ಚಿತ್ರಗಳು ಬಿಡುಗಡೆಯಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಅಮಿತಾಬ್ ಬಚ್ಚನ್ ನಟನೆಯ ಸರ್ಕಾರ್ 3 ಮತ್ತು ಪರಿಣೀತ ಚೋಪ್ರಾ ಅಭಿನಯದ ಮೇರಿ ಪ್ಯಾರಿ ಬಿಂಧು ಚಿತ್ರಗಳು ತೆರೆಕಾಣುತ್ತಿವೆ. ಈ ಎರಡು ಚಿತ್ರಗಳು 2100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದ್ದು ಬಾಹುಬಲಿಗೆ ಸ್ಪರ್ಧೆ ನೀಡಲಿವೆಯೇ ಎಂದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


