ಸಹ ಕಲಾವಿದನಿಗೆ ನಟಿ ರವೀನಾ ಟಂಡನ್ ಕಪಾಳ ಮೋಕ್ಷ
ಬಾಲಿವುಡ್ ಬೆಡಗಿ ರವೀನಾ ಟಂಡನ್ ಕಮ್ ಬ್ಯಾಕ್ ಸಿನಿಮಾ ಮಾತ್ರ್ ಟೀಸರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ರವೀನಾ ಟಂಡನ್ ನಟನೆಯ ಭಾವನಾತ್ಮಕ...

ಮುಂಬಯಿ: ಬಾಲಿವುಡ್ ಬೆಡಗಿ ರವೀನಾ ಟಂಡನ್ ಕಮ್ ಬ್ಯಾಕ್ ಸಿನಿಮಾ ಮಾತ್ರ್ ಟೀಸರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ.
ರವೀನಾ ಟಂಡನ್ ನಟನೆಯ ಭಾವನಾತ್ಮಕ ಸನ್ನಿವೇಶಗಳನ್ನು ನಿರ್ದೇಶಕ ಅಷ್ಟರ್ ಸಾಯಿದ್ ಚಿತ್ರೀಕರಿಸುತ್ತಿದ್ದಾರೆ. ಈ ವೇಳೆ ತನ್ನ ಸಹನಟ ಮಧುರ್ ಮಿತ್ತಲ್ ಕೆನ್ನೆಗೆ ರವೀನಾ ಹೊಡೆದಿದ್ದಾರೆ.
ಭಾವನಾತ್ಮಾಕ ಸನ್ನಿವೇಶ ನೈಜವಾಗಿ ಮೂಡಿ ಬರಬೇಕೆಂಬ ಉದ್ದೇಶದಿಂದ ರವೀನಾ ಕೈಯ್ಯಲ್ಲಿ ನಿರ್ದೇಶಕ ಸಾಯೀದ್ ಮಧುರ್ ಮಿತ್ತಲ್ ಕೆನ್ನೆಗೆ ಭಾರಿಸಲು ಹೇಳಿದ್ದಾರೆ. ಆದರೆ ಮೊದಲು ರವೀನಾ ಇದಕ್ಕೆ ಒಪ್ಪಲಿಲ್ಲ. ನಂತರ ನಿರ್ದೇಶಕರು ಆಕೆಯ ಮನವೊಲಿಸಿದ ನಂತರ ರವೀನಾ ಮಧುರ್ ಕೆನ್ನೆಗೆ ಹೊಡೆದಿದ್ದಾರೆ.
ಕೆಲ ಸನ್ನಿವೇಶಗಳಲ್ಲಿ ನಕಲಿ ಮಾಡುವುದಕ್ಕಿಂತ ನೈಜವಾಗಿ ಚಿತ್ರೀಕರಿಸಿದರೇ ಅದರ ಎಫೆಕ್ಟ್ ಚೆನ್ನಾಗಿರುತ್ತೆ ಎಂದು ನಿರ್ದೇಶಕ ಹೇಳಿದ್ದಾರೆ.
ಆದರೆ ಈ ಬಗ್ಗೆ ಅರಿವಿಲ್ಲದ ಮಧುರ್ ಘಟನೆಯಿಂದ ಕೋಪದಿಂದ ಆಘಾತಕ್ಕೊಳಗಾದರಂತೆ, ಅಲ್ಲದೇ ಮೂರು ಬಾರಿ ರವೀನಾ ಮಧುರ್ ಕೆನ್ನೆಗೆ ಭಾರಿಸಿದ್ದಾರೆ, ಆದರೆ ಇದರ ಬಗ್ಗೆ ಮಧುರ್ ಆಕ್ಷೇಪ ವ್ಯಕ್ತ ಪಡಿಸಿಲ್ಲ, ನಂತರ ಸನ್ನಿವೇಶದ ಶೂಟಿಂಗ್ ಅನ್ನು ತೋರಿಸಿದಾಗ ನೈಜವಾಗಿ ಬಂದಿರುವುದು ಎಲ್ಲರಿಗೂ ಖುಷಿ ತಂದಿದೆ ಎಂದು ಮೂಲಗಳು ತಿಳಿಸಿವೆ. ಮಾತ್ರ್ ಸಿನಿಮಾ ಏಪ್ರಿಲ್ 21 ರಂದು ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


