ಬಾಲಿವುಡ್

ಬಿಡುಗಡೆಯ ವಾರಾಂತ್ಯದಲ್ಲಿಯೇ ೧೫.೨೫ ಕೋಟಿ ಗಳಿಕೆ ದಾಖಲಿಸಿದ 'ಫಿಲ್ಲೌರಿ'

ಅನುಷ್ಕಾ ಶರ್ಮ, ದಿಲ್ಜಿತ್ ಡೋಸನ್ಜ್ ಮತ್ತು ಸೂರಜ್ ಶರ್ಮ ನಟಿಸಿರುವ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರ 'ಫಿಲ್ಲೌರಿ' ಬಿಡುಗಡೆಯ ಮೊದಲ ವಾರದಲ್ಲಿಯೇ ಬಾಕ್ಸ್ ಆಫಿಸ್ ನಲ್ಲಿ ೧೫.೨೫ ಕೋಟಿ

ಬಿಡುಗಡೆಯ ವಾರಾಂತ್ಯದಲ್ಲಿಯೇ ೧೫.೨೫ ಕೋಟಿ ಗಳಿಕೆ ದಾಖಲಿಸಿದ 'ಫಿಲ್ಲೌರಿ'
'ಫಿಲ್ಲೌರಿ' ಸಿನೆಮಾದ ಪೋಸ್ಟರ್
Published On :
ಮುಂಬೈ: ಅನುಷ್ಕಾ ಶರ್ಮ, ದಿಲ್ಜಿತ್ ಡೋಸನ್ಜ್ ಮತ್ತು ಸೂರಜ್ ಶರ್ಮ ನಟಿಸಿರುವ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರ 'ಫಿಲ್ಲೌರಿ' ಬಿಡುಗಡೆಯ ಮೊದಲ ವಾರದಲ್ಲಿಯೇ ಬಾಕ್ಸ್ ಆಫಿಸ್ ನಲ್ಲಿ ೧೫.೨೫ ಕೋಟಿ ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. 

ಮಾರ್ಚ್ ೨೪ಕ್ಕೆ 'ಫಿಲ್ಲೌರಿ' ಬಿಡುಗಡೆಯಾಗಿತ್ತು. "ವಾರಾಂತ್ಯದಲ್ಲಿ ಸಿನೆಮಾ ಒಳ್ಳೆಯ ವ್ಯವಹಾರ ಮಾಡಿರುವುದಕ್ಕೆ ನಾವು ಸಂತಸಗೊಂಡಿದ್ದೇವೆ. ಇದು ದೊಡ್ಡ ಹೃದಯವಿರುವ ಸಣ್ಣ ಚಿತ್ರ. ಭಾರತದಲ್ಲಿ ಮತ್ತು ಜಾಗತಿಕವಾಗಿ ಸಿನೆಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿರುವುದಕ್ಕೆ ನಾವು ಥ್ರಿಲ್ ಆಗಿದ್ದೇವೆ" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ನ ಸಿ ಇ ಒ ವಿಜಯ್ ಸಿಂಗ್ ಹೇಳಿದ್ದಾರೆ. 

೨೧ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ 'ಫಿಲ್ಲೌರಿ', ಈಗಾಗಲೇ ಟಿವಿ ಮತ್ತು ಆಡಿಯೋ ಹಕ್ಕುಗಳ ಮೂಲಕ ೧೨ ಕೋಟಿ ಗಳಿಸಿಕೊಂಡಿದೆ. 

"ಸಿನೆಮಾದ ಸಣ್ಣ ಬಜೆಟ್ ನಿಂದ ನಾವು ಲಾಭ ಮಾಡುವ ಸಿನೆಮಾ ಹೊಂದಿರುವುದು ಆಗಲೇ ನಿಶ್ಚಯವಾಗಿದೆ. 'ಫಿಲ್ಲೌರಿ' ಉತ್ತರ ಭಾರತದಲ್ಲಿ ಬಹಳ ಚೆನ್ನಾಗಿ ವ್ಯವಹಾರ ಮಾಡಿದೆ" ಎಂದು ಸಿಂಗ್ ಹೇಳಿದ್ದಾರೆ. 

ಕ್ಲೀನ್ ಸ್ಟೇಟ್ ಫಿಲಂಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್ ಅಡಿ ಅನುಷ್ಕಾ ತಮ್ಮ ಸಹೋದರೆ ಕರ್ಣೇಶ್ ಶರ್ಮ ಅವರೊಂದಿಗೆ ಈ ಸಿನೆಮಾವನ್ನು ಸಹನಿರ್ಮಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.