ಬಾಲಿವುಡ್

ನಾಚ್ ಬಲಿಯೆ ರಿಯಾಲಿಟಿ ಶೋನಲ್ಲಿ ಯುವರಾಜ್ ದಂಪತಿ ಡಾನ್ಸ್!

ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಪತ್ನಿ ಹಜೆಲ್ ಕೀಚ್ ಜತೆಗೂಡಿ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ...

ನಾಚ್ ಬಲಿಯೆ ರಿಯಾಲಿಟಿ ಶೋನಲ್ಲಿ ಯುವರಾಜ್ ದಂಪತಿ ಡಾನ್ಸ್!
ಯುವರಾಜ್ ಸಿಂಗ್, ಹಜಲ್ ಕೀಚ್
Published On :
ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಪತ್ನಿ ಹಜೆಲ್ ಕೀಚ್ ಜತೆಗೂಡಿ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ. 
ಸ್ಟಾರ್ ಪ್ಲಸ್ ಚಾನಲ್ ನಲ್ಲಿ ಏಪ್ರಿಲ್ 2ರಂದು ಆರಂಭವಾಗಲಿರುವ ನಾಚ್ ಬಲಿಯೆ ಹೆಸರಿನ 8ನೇ ಆವೃತ್ತಿಯ ಡಾನ್ಸ್ ಶೋನಲ್ಲಿ ಈ ಜೋಡಿ ಕಾಣಿಸಿಕೊಳ್ಳಲಿದೆಯಂತೆ. 
ಮುಂದಿನ ಏಪ್ರಿಲ್ 5 ರಿಂದ ಐಪಿಎಲ್ 10ನೇ ಆವೃತ್ತಿಯ ಐಪಿಎಲ್ ನಲ್ಲಿ ಯುವರಾಜ್ ಆಡಲಿದ್ದು ಇದರಿಂದಾಗಿ ಯುವಿ ದಂಪತಿಯನ್ನು ಐಪಿಎಲ್ ಮುಕ್ತಾಯದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಶೋಗೆ ತರಲು ಆಯೋಜಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. 
ಇನ್ನು ಈ ಬಗ್ಗೆ ಆಯೋಜಕರು ಮತ್ತು ಯುವಿ ದಂಪತಿ ಮಾತುಕತೆ ನಡೆಸಿದ್ದು ಯಾವುದೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.