ಬಾಲಿವುಡ್

ಸಾರ್ವಜನಿಕವಾಗಿ ಸುನೀಲ್ ಗ್ರೋವರ್ ಕ್ಷಮೆಯಾಚಿಸಿದ ಕಪಿಲ್ ಶರ್ಮಾ

ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಸಹ ನಟ ಸುನಿಲ್ ಗ್ರೋವರ್ ಮೇಲೆ ಹಲ್ಲೆ ಮತ್ತು ನಿಂದನೆ ನಡೆಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ...

ಸಾರ್ವಜನಿಕವಾಗಿ ಸುನೀಲ್ ಗ್ರೋವರ್ ಕ್ಷಮೆಯಾಚಿಸಿದ ಕಪಿಲ್ ಶರ್ಮಾ
ಕಪಿಲ್ ಶರ್ಮಾ, ಸುನೀಲ್ ಗ್ರೋವರ್
Published On :
ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಸಹ ನಟ ಸುನಿಲ್ ಗ್ರೋವರ್ ಮೇಲೆ ಹಲ್ಲೆ ಮತ್ತು ನಿಂದನೆ ನಡೆಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ. 
ಸಿಡ್ನಿಯಿಂದ ಕಾರ್ಯಕ್ರಮವೊಂದರಿಂದ ಮರಳುತ್ತಿದ್ದಾಗ ಕಪಿಲ್ ವಿಮಾನದಲ್ಲೇ ಸುನೀಲ್ ಗ್ರೋವರ್ ಮೇಲೆ ಹಲ್ಲೆ ನಡೆಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ ಕಪಿಲ್ ಕಾಮಿಡಿ ಶೋನಿಂದ ಸುನೀಲ್ ಹೊರ ಹೋಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೆ ತಿಲಾಂಜಲಿ ಆಡಲು ಮುಂದಾಗಿರುವ ಕಪಿಲ್ ತಮ್ಮ ಟ್ವೀಟರ್ ಖಾತೆಯಲ್ಲಿ 'ಪಾಜಿ' ಸುನೀಲ್ ಗ್ರೋವರ್ ನಿಮಗೆ ನೋವು ಮಾಡಿದ್ದರೆ ನನ್ನಲ್ಲಿ ಕ್ಷಮೆ ಇರಲಿ. ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿಮಗೆ ಗೊತ್ತು. ಈ ಘಟನೆಯಿಂದ ನನಗೂ ಅಸಮಧಾನವಾಗಿದೆ ಎಂದು ಟ್ವೀಟಿಸಿದ್ದರು. 
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ 35 ವರ್ಷದ ಕಪಿಲ್ ಶರ್ಮಾ, ಜೀವನದಲ್ಲಿ ಖುಷಿಯಾಗಿರುವ ವೇಳೆ ಈ ಸುದ್ದಿ ಬಂದಿದೆ. ಗಲಾಟೆ ವಿಚಾರ ನನ್ನನ್ನು ಗಾಬರಿಗೊಳಿಸಿದೆ. ಈ ಸುದ್ದಿ ಎಲ್ಲಿಂದ ಬಂತು ಮತ್ತೆ ಇದಕ್ಕೆ ಏನು ಕಾರಣ ಎಂದು ತಿಳಿದುಕೊಂಡ ನಂತರ ಉತ್ತರ ನೀಡಬೇಕು. ಕೆಲವರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಸುನೀಲ್ ನಾನು ಒಟ್ಟಿಗೆ ಇರುತ್ತೇವೆ. ಒಟ್ಟಿಗೆ ಪ್ರಯಾಣ ಮಾಡುತ್ತೀವಿ. ವರ್ಷಕ್ಕೊಮ್ಮೆ ಮಾತ್ರ ನನ್ನ ಸಹೋದರನನ್ನು ಭೇಟಿ ಮಾಡುತ್ತೇನೆ. ಆದರೆ ನಿನ್ನನ್ನು ದಿನಂಪ್ರತಿ ಭೇಟಿ ಮಾಡುತ್ತಿರುತ್ತೇನೆ. ಸುನೀಲ್ ನನ್ನ ಸಹೋದರನಿದ್ದಂತೆ. ನಾನು ನಿನ್ನನ್ನು ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.