ಬಾಲಿವುಡ್

ಕಪಿಲ್ ಶರ್ಮಾ ಶೋನಿಂದ ಹಾಸ್ಯ ನಟ ಸುನಿಲ್ ಗ್ರೋವರ್ ನಿರ್ಗಮನ?

ಹಾಸ್ಯನಟ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋನ ಪ್ರಮುಖ ಭಾಗವಾಗಿದ್ದರು. ಅವರ...

ಕಪಿಲ್ ಶರ್ಮಾ ಶೋನಿಂದ ಹಾಸ್ಯ ನಟ ಸುನಿಲ್ ಗ್ರೋವರ್ ನಿರ್ಗಮನ?
ಕಪಿಲ್ ಶರ್ಮಾ-ಸುನಿಲ್ ಗ್ರೋವರ್
Published On :
ನವದೆಹಲಿ: ಹಾಸ್ಯನಟ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋನ ಪ್ರಮುಖ ಭಾಗವಾಗಿದ್ದರು. ಅವರ ತೆರೆಯ ಮೇಲಿನ ಪಾತ್ರ ಡಾ.ಮಶೂರ್ ಗುಲಟಿ, ರಿಂಕು ದೇವಿ ಮತ್ತು ಇನ್ನೂ ಹಲವು ಪಾತ್ರಗಳು ಪ್ರೇಕ್ಷಕರನ್ನು ನಕ್ಕು ನಲಿಸಿವೆ. ಆದರೆ ಇನ್ನು ಮುಂದೆ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋವನ್ನು ಬಿಟ್ಟುಬಿಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇನ್ನು ಮುಂದೆ ಸುನಿಲ್ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸುವುದಿಲ್ಲ. ಅವರು ಈಗಾಗಲೇ ಈ ವಾರಾಂತ್ಯದವರೆಗಿನ(ಮಾರ್ಚ್ 18 ಮತ್ತು 19) ಎಪಿಸೋಡ್ ನ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ನಂತರ ಇರುವುದಿಲ್ಲ. ಸಾಕಾಗಿ ಹೋಗಿದೆ. ಕಪಿಲ್ ಶರ್ಮಾ ಇದೇ ರೀತಿ ತಮ್ಮ ನಡತೆಯನ್ನು ಮುಂದುವರಿಸಿದರೆ ಇತರರೂ ಬಿಡಬೇಕಾಗುತ್ತದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತ ವರದಿ ಪ್ರಕಟವಾಗಿಲ್ಲ. ಕೆಲ ದಿನಗಳ ಹಿಂದೆ ಕಪಿಲ್ ಶರ್ಮಾ ಸುನಿಲ್ ಗ್ರೋವರ್ ಗೆ ಏರ್ ಇಂಡಿಯಾ ವಿಮಾನದಲ್ಲಿ ದೈಹಿಕ ಹಲ್ಲೆ ಮಾಡಿದ್ದರು ಎಂದು ವರದಿಯಾಗಿತ್ತು.ಆಗ ಸಹ ಪ್ರಯಾಣಿಕರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರಂತೆ. ಕಪಿಲ್ ಮದ್ಯ ಸೇವಿಸಿ ಸುನಿಲ್ ಮೇಲೆ ಹಲ್ಲೆ ನಡೆಸಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.