ದೀಪಿಕಾ ಪಡುಕೋಣೆ ಬೆಸ್ಟ್ ಕಿಸ್ಸರ್: ರಣವೀರ್ ಸಿಂಗ್
ಬಾಲಿವುಡ್ ಸೂಪರ್ ಜೋಡಿ ಎಂದು ಹೆಸರಾಗಿರುವ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಬಗ್ಗೆ ಹಲವು ಗಾಳಿ ಸುದ್ದಿಗಳು...

Published On :
ಮುಂಬಯಿ: ಬಾಲಿವುಡ್ ಸೂಪರ್ ಜೋಡಿ ಎಂದು ಹೆಸರಾಗಿರುವ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಬಗ್ಗೆ ಹಲವು ಗಾಳಿ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ.
ಇಬ್ಬರ ಲವ್ ಬ್ರೇಕ್ ಅಪ್ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ತಮ್ಮ ಲವ್ ಅಫೇರ್ ಬಗ್ಗೆಯಾಗಲಿ ಅಥವಾ ಬ್ರೇಕ್ ಅಪ್ ಬಗ್ಗೆಯಾಗಲಿ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚೆಗೆ ನಟಿ ನೇಹಾ ಧೂಪಿಯಾ ನಡೆಸಿಕೊಡುವ ನೋ ಪಿಲ್ಟರ್ ನೇಹಾ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಣ್ವೀರ್ ಸಿಂಗ್, ದೀಪಿಕಾ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಪ್ರಕಾರ ಯಾರು ಉತ್ತಮವಾಗಿ ಚುಂಬಿಸುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಣ್ವೀರ್ ದೀಪಿಕಾ ಪಡುಕೋಣೆ ಬೆಸ್ಟ್ ಕಿಸ್ಸರ್ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇಬ್ಬರು ಕಲಾವಿದರು ಬೇರಾಗದೇ ಒಟ್ಟಿಗೆ ಇರಲಿ ಎಂಬುದು ಅವರ ಅಭಿಮಾನಿಗಳು ಆಶಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Deepika Padukoneದೀಪಿಕಾ ಪಡುಕೋಣೆNeha Dhupiaರಣ್ವೀರ್ ಸಿಂಗ್ನೇಹಾ ಧೂಪಿಯಾRanveer Singbest kisserಬೆಸ್ಟ್ ಕಿಸ್ಸರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


