'ಅಜಾನ್' ಅನಾಗರಿಕತೆ, ಸೋನು ನಿಗಮ್ ಬಳಿಕ ಇದೀಗ ಸುಚಿತ್ರ ಟ್ವೀಟ್
ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು...

Published On :
ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಗಾಯಕಿ-ನಟಿ ಸುಚಿತ್ರ ಕೃಷ್ಣಮೂರ್ತಿ ಎಂಬುವರು ಅಜಾನ್ ಕುರಿತು ಟ್ವೀಟ್ ಮಾಡಿದ್ದಾರೆ.
ಜನರ ಮೇಲೆ ಧರ್ಮವನ್ನು ಹೇಗೆ ಒತ್ತಾಯ ಪೂರ್ವಕವಾಗಿ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 4.45ರ ಸುಮಾರಿಗೆ ಆಕ್ರಮಣಕಾರಿ/ಕಿವಿ ಛಿದ್ರಗೊಳಿಸುವ ಅಜಾನ್ ಕರೆ ಅನಾಗರಿಕವಾಗಿದೆ ಎಂದು ಟ್ವೀಟಿಸಿದ್ದು ಇದಕ್ಕೆ ಪರ ವಿರೋಧ ಟ್ವೀಟ್ ಗಳು ಬರುತ್ತಿದೆ.
ನಿಶಬ್ಧ ಸಮಯದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಆಜಾನ್ ಮೂಲಕ ಬೆಳಗ್ಗೆ 5 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸುವುದು ಅನಾಗರಿಕತೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಜಾನ್ ಕುರಿತಂತೆ ಸೋನು ನಿಗಮ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಕೆಲ ಕಿಡಿಗೇಡಿಗಳು ಸೋನು ನಿಗಮ್ ಅವರಿಗೆ ಕೆಲ ಪ್ರತ್ಯಕ್ಷ ಬೆದರಿಕೆಗಳನ್ನು ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟ್ಟರ್ಸೋನು ನಿಗಮ್Sonu Nigamಧಾರ್ಮಿಕತೆAzaanReligiousnessಅಜಾನ್Suchitra Krishnamoorthiಸುಚಿತ್ರ ಕೃಷ್ಣಮೂರ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


