3 ದಿನದಲ್ಲಿ 50 ಕೋಟಿ ಬಾಚಿದ ಅಕ್ಷಯ್ ಅಭಿನಯದ ಜಾಲಿ ಎಲ್‍ಎಲ್‍ಬಿ 2
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಯಾಗಿ ಮೂರೇ ದಿನಕ್ಕೆ 50 ಕೋಟಿ ಗಳಿಸಿದೆ...

Published On :
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಯಾಗಿ ಮೂರೇ ದಿನಕ್ಕೆ 50 ಕೋಟಿ ಗಳಿಸಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ 13.20 ಕೋಟಿ, ಎರಡನೇ ದಿನ 17.31 ಕೋಟಿ ಮೂರನೇ ದಿನ 19.95 ಕೋಟಿ ಗಳಿಸಿದ್ದು ಒಟ್ಟಾರೆ ಮೂರು ದಿನಗಳ ಕಲೆಕ್ಷನ್ 50.46 ಕೋಟಿ ದಾಟಿದೆ.
ನಿರ್ದೇಶಕ ಸುಭಾಶ್ ಕಪೂರ್ 2013ರಲ್ಲಿ ಜಾಲಿ ಎಲ್‍ಎಲ್‍ಬಿ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಮೊದಲ ಅವತರಣಿಕೆ ಚಿತ್ರದಲ್ಲಿ ಅರ್ಶದ್ ವಾರ್ಸಿಯ ಅಭಿನಯ ಮರೆಯಲು ಸಾಧ್ಯವಿಲ್ಲ. ತನ್ನ ಬಡಪಾಯಿ ಕಕ್ಷಿದಾರನಿಗೆ ನ್ಯಾ ಒದಗಿಸಲು ಹೋರಾಡುವ ವಕೀಲನ ಪಾತ್ರದಲ್ಲಿ ವಾರ್ಸಿ ಮನೋಜ್ಞವಾಗಿ ಅಭಿನಯಿಸಿದ್ದರು. ಇದೀಗ ಚಿತ್ರದ ಮತ್ತೊಂದು ಸರಣಿಯಲ್ಲಿ ಅಕ್ಷಯ್ ಕುಮಾರ್ ಇನ್ನು ಅದ್ಭುತವಾಗಿ ನಡೆಸಿದ್ದು ನ್ಯಾಯಾಂಗ ವ್ಯವಸ್ಥೆಯ ಹುಳುಕುಗಳನ್ನು ತೋರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್box-officeಬಾಕ್ಸ್ ಆಫೀಸ್collectionAkshay Kumarಅಕ್ಷಯ್ ಕುಮಾರ್ಕಲೆಕ್ಷನ್Jolly LLB 2ಜಾಲಿ ಎಲ್‍ಎಲ್‍ಬಿ 2
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


