ಪಾಕಿಸ್ತಾನದಲ್ಲಿ ರಾಯೀಸ್ ಸಿನಿಮಾ ಪ್ರದರ್ಶನ ರದ್ದು
ಪಾಕಿಸ್ತಾನ ಚಿತ್ರಮಂದಿರಗಳಲ್ಲಿ ಭಾನುವಾರ ಸಖತ್ ಹಿಟ್ ಕಂಡಿದ್ದ ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಪ್ರದರ್ಶನವನ್ನು...

ಇಸ್ಲಮಾಬಾದ್: ಪಾಕಿಸ್ತಾನ ಚಿತ್ರಮಂದಿರಗಳಲ್ಲಿ ಭಾನುವಾರ ಸಖತ್ ಹಿಟ್ ಕಂಡಿದ್ದ ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಸಿನಿಮಾದಲ್ಲಿ ಮುಸ್ಲಿಮರ ಬಗ್ಗೆ ಅನುಚಿತವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಶಾರೂಖ್ ಖಾನ್ ಮತ್ತು ಮಹಿರಾ ಖಾನ್ ನಟನೆಯ ಈ ಚಿತ್ರ ಕಳೆದ ಪಾಕಿಸ್ತಾನದಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿತ್ತು. ಆದರೆ ಪಾಕಿಸ್ತಾನ ಸಿನಿಮಾ ಸೆನ್ಸಾರ್ ಬೋರ್ಡ್ ಚಿತ್ರ ಪ್ರದರ್ಶಿಸದಿರುವಂತೆ ಸೂಚಿಸಿದೆ ಎಂದು ಸ್ಥಳೀಯ ಪತ್ರಿಕೆ ಡಾನ್ ವರದಿ ಮಾಡಿದೆ.
ಸಿನಿಮಾದಲ್ಲಿ ಮುಸ್ಲಿಮರನ್ನು ಕ್ರಿಮಿನಲ್ ಗಳಂತೆ ಚಿತ್ರಿಸಲಾಗಿದೆ, ಧರ್ಮವೊಂದನ್ನು ಗುರಿಯಾಗಿಸಿಕೊಂಡು ವ್ಯಕ್ತಿಗಳನ್ನು ವಾಂಟೆಂಡ್ ಪರ್ಸನ್ ಮತ್ತು ಭಯೋತ್ಪಾದಕರಂತೆ ಬಿಂಬಿಸಲಾಗಿದೆ ಎಬ ಉದ್ದೇಶದಿಂದ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಪಾಕಿಸ್ತಾನ ಕಲಾವಿದರನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಯೀಸ್ ಚಿತ್ರದ ಪ್ರಮೋಷನ್ ನಲ್ಲಿ ಪಾಕ್ ಕಲಾವಿದೆ ಮಹಿರಾ ಖಾನ್ ಭಾಗವಹಿಸಿರಲಿಲ್ಲ. ಇದು ಎರಡು ದೇಶಗಳ ಸಂಬಂಧದ ಮೇಲೆ ಮತ್ತಷ್ಟು ಹುಳಿ ಹಿಂಡಿತ್ತು.
ಪಾಕಿಸ್ತಾನದಲ್ಲಿ ಭಾರತೀಯ ಚಿತ್ರ ಪ್ರದರ್ಶವನ್ನು ರದ್ದುಗೊಳಿಸಿದ್ದ ಹಲವು ತಿಂಗಳುಗಳ ನಂತರ ಕಾಬಿಲ್ ಚಿತ್ರವನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


