ಕೇಂದ್ರ ಸರ್ಕಾರದ ಕೃಷಿ ಯೋಜನೆಗಳ ರಾಯಭಾರಿಯಾಗಿ ಅಕ್ಷಯ್ ಕುಮಾರ್ ಆಯ್ಕೆ
ಕೇಂದ್ರ ಸರ್ಕಾರದ ಪ್ರಮೂಖ ಕೃಷಿ ಅಭಿವೃದ್ದಿ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದಾರೆ.

Published On :
ನವದೆಹಲಿ: ಕೇಂದ್ರ ಸರ್ಕಾರದ ಪ್ರಮೂಖ ಕೃಷಿ ಅಭಿವೃದ್ದಿ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದಾರೆ.
ಕೃಷಿ ಯೋಜನೆಗಳ ಪ್ರಚಾರವನ್ನು ತೀವ್ರಗೊಳಿಸಲು ಟಿವಿ ಜಾಹೀರಾತಿನತ್ತ ಮುಖ ಮಾಡಿರುವ ಕೇಂದ್ರ ಕೃಷಿ ಸಚಿವಾಲಯವು ಅಕ್ಷಯ್ ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗಿಸಿದೆ. "ರೈತರ ಲಾಭಕ್ಕಾಗಿ ಇರಬಹುದಾದ ಪ್ರಮುಖ ಯೋಜನೆಗಳ ಬಗೆಗೆ ನಾವು ಹೆಚ್ಚು ಅರಿವು ಮೂಡಿಸಲು ಬಯಸುತ್ತೇವೆ, ಇದರಿಂದಾಗಿ ರೈತರು ಲಾಭ ಪಡೆಯುತ್ತಾರೆ. ನಾವು ನಮ್ಮ ಯೋಜನೆಗಳ ವ್ಯಾಪಕ ಪ್ರಚಾರಕ್ಕಾಗಿ ಟಿವಿ ಜಾಹೀರಾತುಗಳಿಗಾಗಿ ಅಕ್ಷಯ್ ಕುಮಾರ್ ಅವರನ್ನು ರಾಯಭಾರಿಯಾಗಿಸಿಕೊಂಡಿದ್ದೇವೆ." ಓರ್ವ ಅಧಿಕಾರಿ ಪಿಟಿಐ ಗೆ ತಿಳಿಸಿದ್ದಾರೆ.
ಮಣ್ಣಿನ ಫಲವತ್ತತೆ ಪರೀಕ್ಷೆ, ಬೆಳೆ ವಿಮೆ ಯೋಜನೆಗಳು, ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ, ಪರಂಪರಾಗತ ಕೃಷಿ ವಿಕಾಸ್ ಯೋಜನೆಗಳ ಸಂಬಂಧ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅಕ್ಷಯ್ ಕುಮರ್ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ambassadorಪ್ರಚಾರ ರಾಯಭಾರಿAkshay Kumarಅಕ್ಷಯ್ ಕುಮಾರ್government\'s agriculture schemesTV adsPradhan Mantri Fasal Bhima Yojanaಸರ್ಕಾರದ ಕೃಷಿ ಯೋಜನೆಗಳುಟಿವಿ ಜಾಹೀರಾತುಪ್ರಧಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


