ಮದುವೆ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್ ಬೆಡಗಿ ಐಶ್ವರ್ಯ ರೈ
ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನಿನ್ನೆ ರಾತ್ರಿ ನಡೆದ ವಿವಾಹ ಸಮಾರಂಭ ಒಂದರಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ಭಾಗವಹಿಸಿದ್ದರು.

Published On :
ಮಂಗಳುರು: ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನಿನ್ನೆ ರಾತ್ರಿ ನಡೆದ ವಿವಾಹ ಸಮಾರಂಭ ಒಂದರಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ಭಾಗವಹಿಸಿದ್ದರು.
ಕೊಡಿಯಾಲ್ ಬೈಲಿನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಐಶ್ವರ್ಯ ಅವರ ತಾಯಿ ಬೃಂದಾ ರೈ ಅವರ ಸೋದರ ಸೋಂತಾಡಿ ಉದಯ ಕುಮಾರ್ ಶೆಟ್ಟಿ, ಅವರ ಪುತ್ರ ಉಜ್ವಲ್ ಅವರ ಮದುವೆ ಕಾರ್ಯಕ್ರಮಕ್ಕೆ ಬಾಲಿವುಡ್ ಬೆಡಗಿ ಐಶ್ವರ್ಯ ಆಗಮಿಸಿದ್ದರು. ಐಶ್ವರ್ಯ ಅವರ ತಾಯಿ ಬೃಂದಾ ರೈ ಕೂಡಾ ಜತೆಗಿದ್ದರು.
ತಾಯ್ ಹಾಗೂ ಮಗಳು ಇಬ್ಬರೂ ಅಚ್ಚ ತುಳುನಾಡಿನ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದು ಎಲ್ಲರ ಗಮನ ಸೆಳೆಯಿತು. ಎಲ್ಲರೊಡನೆ ಸರಳವಾಗಿ ಮಾತನಾಡಿದ ನಟಿ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದರು. ಕೆಂಪು ಬಣ್ಣದ ಸೀರೆಯುಟ್ಟಿದ್ದ ಐಶ್ವರ್ಯ ತಮ್ಮ ಮಗಳಿಗೂ ಅದೇ ಬಣ್ಣದ ಉಡುಗೆ ತೊಡಿಸಿದ್ದರು. ತುಳು ಭಾಷೆಯಲ್ಲಿಯೇ ಮಾತನಾಡುತ್ತಾ ಕುಟುಂಬ ಸದಸ್ಯರೊಡನೆ ಮಿಳಿತವಾದ ನಟಿ ಕೋರಿ ಸುಕ್ಕ, ‘ಅಂಜಲ್ ಫ್ರೈ ಸೇವಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಂಗಳೂರುMangaloreAishwarya Raiಐಶ್ವರ್ಯಾ ರೈAaradhyaಆರಾಧ್ಯfamily functionBrinda Raiಕೌಟುಂಬಿಕ ಕಾರ್ಯಕ್ರಮಬೃಂದಾ ರೈ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


