ಬಾಲಿವುಡ್

ಬಾಹುಬಲಿ-2 ತೆರೆಕಾಣಲು ಸಿದ್ಧತೆ ನಡೆದಿರುವಂತೆಯೇ ಬಾಹುಬಲಿ-1 ಮತ್ತೆ ತೆರೆಗೆ!

ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಈ ಹಿಂದೆ ತೆರೆಗೆ ಬಂದಿದ್ದ ಬಾಹುಬಲಿ-1 ಅನ್ನು ಮತ್ತೆ ದಾಖಲೆ ಚಿತ್ರ ಮಂದಿರಗಳಲ್ಲಿ ತೆರೆಗೆ ತರಲಾಗುತ್ತಿದೆ.

ಬಾಹುಬಲಿ-2 ತೆರೆಕಾಣಲು ಸಿದ್ಧತೆ ನಡೆದಿರುವಂತೆಯೇ ಬಾಹುಬಲಿ-1 ಮತ್ತೆ ತೆರೆಗೆ!
ಸಂಗ್ರಹ ಚಿತ್ರ
Published On :

ನವದೆಹಲಿ: ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಈ ಹಿಂದೆ ತೆರೆಗೆ ಬಂದಿದ್ದ ಬಾಹುಬಲಿ-1 ಅನ್ನು ಮತ್ತೆ ದಾಖಲೆ ಚಿತ್ರ ಮಂದಿರಗಳಲ್ಲಿ ತೆರೆಗೆ ತರಲಾಗುತ್ತಿದೆ.

ಖ್ಯಾತ ಬಾಲಿವುಡ್ ಬಾಕ್ಸ್ ಅಫೀಸ್ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿರುವಂತೆ ಬಾಹುಬಲಿ-2 ಚಿತ್ರ ತೆರೆಗೆ ಬರುವ ಮುನ್ನ ಬಾಹುಬಲಿ-1 ಚಿತ್ರದ ಹಿಂದಿ ಅವತರಣಿಕೆ ದೇಶಾದ್ಯಂತ ಮತ್ತೆ ತೆರೆಗೆ ಬರುತ್ತಿದೆ. ಅದೂ ಕೂಡ  ದಾಖಲೆ ಪ್ರಮಾಣದ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಬಾಹುಬಲಿ-1 ಚಿತ್ರದ ಹಿಂದಿ ಅವತರಣಿಕೆ ಸುಮಾರು 900 ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದ್ದು, ಇದು ಬಾಲಿವುಡ್  ಇತಿಹಾಸದಲ್ಲಿಯೇ ಅತೀ ಹೆಚ್ಚು ಸ್ಕ್ರೀನ್ ಗಳ ರಿ-ರೀಲೀಸ್ ದಾಖಲೆಯಂತೆ. ಈ ಹಿಂದೆ 80-90ರ ದಶಕದಲ್ಲಿ ಸಾಮಾನ್ಯವಾಗಿದ್ದ ರಿ-ರಿಲೀಸ್ ಪ್ರಕ್ರಿಯೆ ಬಾಹುಬಲಿ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದು, ಆದೂ ಕೂಡ  ದಾಖಲೆ ಪ್ರಮಾಣದ ಸ್ಕ್ರೀನ್ ಗಳಲ್ಲಿ ಬಾಹುಬಲಿ -1 ಮತ್ತೆ ತೆರೆಕಾಣುವ ಮೂಲಕ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಅತ್ತೀ ಹೆಚ್ಚು ಸ್ಕ್ರೀನ್ ಗಳಲ್ಲಿ ಮತ್ತೆ ತೆರೆಕಂಡ ಮೊದಲ ಚಿತ್ರವಾಗಿ ಬಾಹುಬಲಿ-1 ಖ್ಯಾತಿಗಳಿಸಲಿದೆ.

ಬಾಹುಬಲಿ-2 (ದ ಕನ್ ಕ್ಲೂಷನ್) ಚಿತ್ರವು ಬಾಹುಬಲಿ-1 (ದಿ ಬಿಗಿನಿಂಗ್) ಚಿತ್ರದ ಮುಂದುವರೆದ ಭಾಗವಾಗಿದ್ದು, ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೂ ಉತ್ತರ ದೊರೆಯಲಿದೆ.

ಇನ್ನು ಬಾಹುಬಲಿ-1 ಚಿತ್ರದ ರಿ-ರಿಲೀಸ್ ಅನ್ನು ಬಾಹುಬಲಿ-2 ಚಿತ್ರದ ಪ್ರಚಾರದ ಉದ್ದೇಶ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ನಿರ್ದೇಶಕ ರಾಜಮೌಳಿ ಚಾಣಾಕ್ಷರಾಗಿದ್ದು, ಬಾಹುಬಲಿ-1ಅನ್ನು ಮತ್ತೆ ತೆರೆಗೆ ತರುವ ಮೂಲಕ ಮತ್ತೆ  ಪ್ರೇಕ್ಷಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಚಾಣಾಕ್ಷ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಏಪ್ರಿಲ್ 7ರಂದು ಬಾಹುಬಲಿ-1 ಚಿತ್ರ ಹಿಂದಿ ಭಾಷೆಯಲ್ಲಿ ದೇಶಾದ್ಯಂತ ತೆರೆಕಾಣುತ್ತಿದ್ದು, ಏಪ್ರಿಲ್ 28ರಂದು  ಬಾಹುಬಲಿ-2 ಚಿತ್ರ ತೆರೆಗೆ ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.