ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಸಚಿನ್ ತೆಂಡೂಲ್ಕರ್ ಗಾಯನ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇಂಡಿಯನ್ ಐಡಲ್ ಗಾಯನ ರಿಯಾಲಿಟಿ ಶೋನ 9ನೇ ಆವೃತ್ತಿಯಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಜತೆಗೂಡಿ ಕ್ರಿಕೆಟ್ ವಾಲಿ...

Published On :
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇಂಡಿಯನ್ ಐಡಲ್ ಗಾಯನ ರಿಯಾಲಿಟಿ ಶೋನ 9ನೇ ಆವೃತ್ತಿಯಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಜತೆಗೂಡಿ ಕ್ರಿಕೆಟ್ ವಾಲಿ ಬೀಟ್ ಪೇ ಎಂದು ಹಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
9ನೇ ಆವೃತ್ತಿಯ ಫೈನಲ್ ಎಪಿಸೋಡ್ ಗೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ ಹಾಡಿದ್ದು ಈ ಹಾಡು ಡಿಜಿಟಲ್ ಅಪ್ಲಿಕೇಷನ್ 100 ಎಂಬಿ ಆಪ್ ನಲ್ಲಿ ಸಿಗಲಿದೆ.
ಸಂಗೀತದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಸಚಿನ್ ತಮ್ಮ ಜತೆಗೆ ಆರು ವಿಶ್ವಕಪ್ ಗಳಲ್ಲಿ ಆಡಿದ ಆ ಎಲ್ಲ ಕ್ರಿಕೆಟಿಗರಿಗೂ ಈ ಹಾಡಿನಲ್ಲಿ ವಂದನೆ ಸಲ್ಲಿಸಿದ್ದಾರಂತೆ.
ಈ ಹಾಡಿನ ಮೊದಲ ಸಾಲು ಗೇಂದ್ ಆಯಿ ಬಲ್ಲಾ ಘುಮಾ ಮಾರಾ ಚಕ್ಕಾ, ಸಚಿನ್ ನಾಚೊ...ನಾಚೋ ಸಬ್ ಕ್ರಿಕೆಟ್ ವಾಲಿ ಬೀಟ್ ಪೇ ಎಂದು ಪ್ರಾರಂಭವಾಗಲಿದ್ದು ಈ ಹಾಡು ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
ಗಾಯನ ರಿಯಾಲಿಟಿ ಶೋ ಇಂಡಿಯನ್ ಐಡಲ್ ನ 9ನೇ ಆವೃತ್ತಿಯ ವಿನ್ನರ್ ಆಗಿ ಬಾಹುಬಲಿ ಚಿತ್ರ ಗೀತೆಯನ್ನು ಹಾಡಿದ್ದ ಎಲ್.ವಿ ರೇವಂತ್ ಎಂಬುವರು ಹೊರಹೊಮ್ಮಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


