ಬಾಲಿವುಡ್

ಉರಿಯಲ್ಲಿ ಭಾರತೀಯ ಸೈನಿಕರ ಸಾವು: ಹುಟ್ಟುಹಬ್ಬ ಆಚರಿಸದಿರಲು ಲತಾ ಮಂಗೇಶ್ಕರ್ ನಿರ್ಧಾರ

ಜಮ್ಮು-ಕಾಶ್ಮೀರದ ಉರಿಯಲ್ಲಿ ಇತ್ತೀಚೆಗೆ 18 ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದ್ದರಿಂದ ತಮ್ಮ ಹುಟ್ಟುಹಬ್ಬವನ್ನು...

ಉರಿಯಲ್ಲಿ ಭಾರತೀಯ ಸೈನಿಕರ ಸಾವು: ಹುಟ್ಟುಹಬ್ಬ ಆಚರಿಸದಿರಲು ಲತಾ ಮಂಗೇಶ್ಕರ್ ನಿರ್ಧಾರ
ಲತಾ ಮಂಗೇಶ್ಕರ್
Published On :
ಮುಂಬೈ: ಜಮ್ಮು-ಕಾಶ್ಮೀರದ ಉರಿಯಲ್ಲಿ ಇತ್ತೀಚೆಗೆ 18 ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದ್ದರಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಶ್ಚಯಿಸಿದ್ದಾರೆ. ಇಂದು ಅವರ 87ನೇ ಹುಟ್ಟುಹಬ್ಬ. ಆದರೆ ಎಲ್ಲೆಡೆಯೂ ಕತ್ತಲೆ ತುಂಬಿಕೊಂಡಿರುವಾಗ, ಪಾಕಿಸ್ತಾನದ ಜೊತೆ ಸಂಬಂಧ ಹದಗೆಡುತ್ತಿರುವಾಗ, ಯುದ್ಧ, ಸೈನಿಕರ ಸಾವಿನ ಸುದ್ದಿ ಮಧ್ಯೆ ಹುಟ್ಟುಹಬ್ಬ ಆಚರಿಸುವ ವಾತಾವರಣವಿಲ್ಲ. ಆ ಖುಷಿಯೂ ಇಲ್ಲ ಎಂದಿದ್ದಾರೆ ಲತಾ. ಪಾಕಿಸ್ತಾನದವರು ಶಾಂತಿ ಮತ್ತು ಖುಷಿಯಿಂದ ಇದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
''ನನ್ನ ಹುಟ್ಟುಹಬ್ಬ ಎಂದು ಅಭಿಮಾನಿಗಳು ಹೂ ಬೊಕ್ಕೆ, ಕೇಕು, ಸ್ವೀಟು ಎಂದು ಹಣ ಖರ್ಚು ಮಾಡುವ ಬದಲು ಯುದ್ಧದಲ್ಲಿ ಮೃತಪಟ್ಟ ಸೈನಿಕರ ಕುಟುಂಬದವರಿಗೆ ಆ ಹಣವನ್ನು ಕಳುಹಿಸಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರನ್ನು ನೆನಪು ಮಾಡಿಕೊಳ್ಳಿ'' ಎಂದು ಮನವಿ ಮಾಡಿಕೊಂಡಿದ್ದಾರೆ.
ಒಂದು ದೇಶ ಇನ್ನೊಂದು ದೇಶದ ವಿರುದ್ಧ ಯುದ್ಧ ಮಾಡಿ ದ್ವೇಷ ಸಾಧಿಸುವ ಬದಲು ತಮ್ಮ ತಮ್ಮ ದೇಶದ ಏಳಿಗೆ, ಶಾಂತಿಯನ್ನು ನೋಡಿಕೊಂಡರೆ ಅಭಿವೃದ್ಧಿಯಾಗುತ್ತದೆ ಎಂದು ಲತಾ ಮಂಗೇಶ್ಕರ್ ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. 
ಈ ಮಧ್ಯೆ ಪಶ್ಚಿಮ ಬಂಗಾಳ ಸರ್ಕಾರ ಲತಾ ಮಂಗೇಶ್ಕರ್ ಅವರಿಗೆ ಅಲ್ಲಿನ ಅತ್ಯಂತ ಉನ್ನತ ನಾಗರಿಕ ಸನ್ಮಾನ ಬಂಗಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.