ನನ್ನ ಸಾಕ್ಷ್ಯ ಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ: ಸನ್ನಿ ಲಿಯೋನ್
ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ...

ಮುಂಬಯಿ: ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ ಇಷ್ಟವಿಲ್ಲವಂತೆ.
ಸಾಂಪ್ರದಾಯಿಕ ಸಿಖ್ ಕುಟುಂಬದಲ್ಲಿ ಹುಟ್ಟಿ, ವಯಸ್ಕರ ಚಿತ್ರ ಜಗತ್ತಿನ ಜನಪ್ರಿಯ ತಾರೆಯಾಗಿ ಬೆಳೆದ ಮತ್ತು ಬಾಲಿವುಡ್‌ನ ಮುಖ್ಯವಾಹಿನಿಯ ಚಿತ್ರಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡ ಕಥನವನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.ಈ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ ಎಂದು ಸನ್ನಿ ಹೇಳಿದ್ದಾಳೆ.
ಈ ಸಾಕ್ಷ್ಯ ಚಿತ್ರದಲ್ಲಿ ನನ್ನ ಬದುಕಿನ ಕಥನಕ್ಕಿಂತಲೂ ಬೇರೆಯವರು ನನ್ನ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳೇ ತುಂಬಿವೆ. ನನ್ನ ಕುರಿತು ಬೇರೆಯವರು ಯಾವ ದೃಷ್ಟಿಕೋನ ಹೊಂದಿದ್ದಾರೆ ಎಂಬುದನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ.
ಇದು ನನ್ನ ಬದುಕನ್ನು ಆಧರಿಸಿದ ಜೀವನಚಿತ್ರವಲ್ಲ. ಅವರಿಗೆ ಏನು ಬೇಕೋ ಅದನ್ನು ಬರೆದುಕೊಂಡು ಚಿತ್ರ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಡಿಸೆಂಬರ್ ನಲ್ಲಿ ಮೋಸ್ಟ್ಲಿ ಸನ್ನಿ ಸಾಕ್ಷ್ಯಚಿತ್ರ ರಿಲೀಸ್ ಆಗಲಿದೆ.
ದಿಲಿಪ್ ಮೆಹ್ರಾ ನಿರ್ದೇಶಿಸಿರುವ ’ಮೋಸ್ಟ್ಲಿ ಸನ್ನಿ’ ಸಾಕ್ಷ್ಯಚಿತ್ರವು ಇತ್ತೀಚೆಗೆ ಟೊರೆಂಟೊ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


