ದೀಪಿಕಾ ಪಡುಕೋಣೆ ಬಗ್ಗೆ ನನಗೆ ಹೆಮ್ಮೆಯಿದೆ: ಹೃತಿಕ್ ರೋಷನ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ನಟ ಹೃತಿಕ್ ರೋಷನ್ ಹೇಳಿದ್ದಾರೆ...

ಮುಂಬಯಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ನಟ ಹೃತಿಕ್ ರೋಷನ್ ಹೇಳಿದ್ದಾರೆ.
ತಾವೊಬ್ಬ ಸೆಲೆಬ್ರಿಟಿಯಾಗಿದ್ದರೂ ದೀಪಿಕಾ ಅನುಭವಿಸುತ್ತಿರುವ ಖಿನ್ನತೆ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೇ ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಕೂಡ ಒಂದು ಹಂತದಲ್ಲಿ ಈ ಖಿನ್ನತೆಗೆ ಬಲಿಯಾಗಿದ್ದೆ, ಮಾನಸಿಕ ಆರೋಗ್ಯ ಎಂಬುದು ಎಲ್ಲರಿಗೂ ಮುಖ್ಯಾವಾದದ್ದು. ಈ ಖಿನ್ನತೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಹುತ್ತದೆ. ಆದರೆ ಎಷ್ಟೇ ಹತ್ತಿರದವರಾದರೂ ಖಿನ್ನತೆಯಿಂದ ನಾವು ಹೊರಬರಲು ಸಹಾಯ ಮಾಡುವುದು ಕಷ್ಟ ಎಂದು ನನಗನಿಸುತ್ತದೆ ಎಂದು ಹೃತಿಕ್ ರೋಷನ್ ಅಭಿಪ್ರಾಯ ಪಟ್ಟಿದ್ದಾರೆ.
ನಾನು ಯಾವುತ್ತೂ ಕ್ಲಿನಿಕಲಿ ಡಿಪ್ರೆಶನ್ ಗೆ ಒಳಗಾಗಿಲ್ಲ, ಆದರೆ ನಾವೆಲ್ಲಾ ಜೀವನದ ಒಂದಲ್ಲ ಒಂದು ಹಂತದಲ್ಲಿ ಈ ಖಿನ್ನತೆಗೆ ಒಳಗಾಗಿರುತ್ತೇವೆ, ಜೀವನದ ಈ ಕತ್ತಲು ಸನ್ನಿವೇಶದಿಂದ ಪಾರಾಗಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಮಗೆ ಖಿನ್ನತೆಯಿದೆ ಎಂದು ಹೇಳಿಕೊಂಡಾಗ ಜನರು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಇಂಥ ಅಪಾಯ ಇದ್ದಾಗಲೂ ದೀಪಿಕಾ ಯಾವುದೇ ಹಿಂಜರಿಕೆಯಿಲ್ಲದೇ ದೀಪಿಕಾ ಈ ವಿಷಯವನ್ನು ಹಂಚಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


