ಬಾಲಿವುಡ್

ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ: ಕಂಗನಾ ರಣಾವತ್

ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ 'ಕ್ವೀನ್' ಎಂದೇ ಕರೆಯಲಾಗುತ್ತದೆ. ಯಾವುದೇ ಒತ್ತಡದಿಂದ ನನಗೆ ಯಶಸ್ಸು ಒಲಿದದ್ದಲ್ಲ

ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ: ಕಂಗನಾ ರಣಾವತ್
ನಟಿ ಕಂಗನಾ ರಣಾವತ್
Published On :
ನವದೆಹಲಿ: ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ 'ಕ್ವೀನ್' ಎಂದೇ ಕರೆಯಲಾಗುತ್ತದೆ. ಯಾವುದೇ ಒತ್ತಡದಿಂದ ನನಗೆ ಯಶಸ್ಸು ಒಲಿದದ್ದಲ್ಲ ಎನ್ನುವ ನಟಿ, ನಟಿಯಾಗಿ ಸೋಲುಗಳು ಯಾವತ್ತೂ ವಿಶ್ವಾಸಾರ್ಹತೆಗೆ ಧಕ್ಕೆ ತರುವುದಿಲ್ಲ ಎನ್ನುತ್ತಾರೆ. 
ಹಾಗೆಯೇ ಯಾವುದೇ ಒಂದು ಯೋಜನೆ ಚಿತ್ರರಂಗದಲ್ಲಿ ತಮ್ಮ ಸ್ಥಾನಮಾನ ಏರಿಸುತ್ತದೆ ಎಂಬ ಮಾತ್ರಕ್ಕೆ ನಾನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಕೂಡ ಅವರು ತಿಳಿಸುತ್ತಾರೆ. 
"ನಾನು ಈ ಕೆಲಸವನ್ನು ಮಾಡಲೇಬೇಕು ಅಥವಾ ಈ ಎತ್ತರ ಏರಲೇಬೇಕು ಎಂಬುವ ಯಾವುದೇ ಗುರಿಗಳನ್ನು ಹಾಕಿಕೊಂಡಿಲ್ಲ. ಅಂತಹ ಒತ್ತಡವನ್ನು ನಾನು ಸೃಷ್ಟಿಸಿಕೊಳ್ಳುವುದಿಲ್ಲ. ನನ್ನ ದಾರಿಯಲ್ಲಿ ನಾನು ನಡೆಯುತ್ತೇನೆ. ಬಹುಷಃ ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ" ಎನ್ನುತ್ತಾರೆ ಕಂಗನಾ. 
"ಯಾವುದೇ ಒಂದು ಯೋಜನೆ ನಟಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಹಲವಾರು ಫ್ಲಾಪ್ ಚಿತ್ರಗಳನ್ನು ನೀಡಿಯೂ ಬಹಳ ಬೇಡಿಕೆಯ ನಟಿಯಾಗಬಹುದು ಮತ್ತು ಅದು ನನ್ನ ಕಥೆಯೇ" ಎಂದು ಕೂಡ ನಟಿ ತಿಳಿಸುತ್ತಾರೆ. 
ಮನಾಲಿ ಹತ್ತಿರದ ಗ್ರಾಮದಿಂದ ಬಾಲಿವುಡ್ ಗೆ ಪ್ರವೇಶ ಪಡೆದ ಕಂಗನಾ ಈಗ ಅದೇ ಚಿತ್ರರಂಗದ ಅತಿ ಹೆಚ್ಚು ಜನಪ್ರಿಯ ನಟಿಯಾಗಿ ಬೆಳೆದಿದ್ದಾರೆ. 'ಗ್ಯಾಂಗ್ಸ್ಟರ್', 'ವೊ ಲಂಹೆ' ಲೈಫ್ ಇನ್ ಎ ಮೆಟ್ರೋ', 'ತಾನು ವೆಡ್ಸ್ ಮನು ರಿಟರ್ನ್ಸ್', 'ಕ್ವೀನ್' 'ಫ್ಯಾಷನ್' ಸಿನೆಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.
ಈಗ ಕಂಗನಾ ಸದ್ಯಕ್ಕೆ ಹಂಸಲ್ ಮೆಹತಾ ಅವರ 'ಸಿಮ್ರಾನ್' ಸಿನೆಮಾದಲ್ಲಿ ನಿರತರಾಗಿದ್ದಾರೆ. ಈ ಸಿನೆಮಾದಲ್ಲಿ ವಿಚ್ಚೇಧನ ಪಡೆದ 30 ವರ್ಷದ ಯುವತಿಯ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. 
"ಯಾವ ಸಿನೆಮಾದಲ್ಲಿ ನಟಿಸುತ್ತೀರಿ ಎಂಬುದಕ್ಕಿಂತ ಅವುಗಳನ್ನು ಹೇಗೆ ನಟಿಸುತ್ತೀರಿ ಎಂಬುದು ಬಹಳ ಮುಖ್ಯ" ಎನ್ನುತ್ತಾರೆ ಕಂಗನಾ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.