ಬಾಲಿವುಡ್

ಸಿದ್ಧಾರ್ಥ್ ಗೆ 'ಅತ್ಯುತ್ತಮ ಕಿಸ್ಸರ್' ಪ್ರಮಾಣಪತ್ರ ನೀಡಿದ ಆಲಿಯಾ

ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ #ನೋಫಿಲ್ಟರ್ ನೇಹಾ ಜನಪ್ರಿಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಭಾಗವಹಿಸಿದ್ದ ನಟಿ ಆಲಿಯಾ ಭಟ್.

ಸಿದ್ಧಾರ್ಥ್ ಗೆ 'ಅತ್ಯುತ್ತಮ ಕಿಸ್ಸರ್' ಪ್ರಮಾಣಪತ್ರ ನೀಡಿದ ಆಲಿಯಾ
'ಸ್ಟೂಡೆಂಟ್ ಆಫ್ ದಿ ಇಯರ್' ಸಿನೆಮಾದಲ್ಲಿ ಆಲಿಯಾ ಮತ್ತು ಸಿದ್ಧಾರ್ಥ್
Published On :
ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ #ನೋಫಿಲ್ಟರ್ ನೇಹಾ ಜನಪ್ರಿಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಭಾಗವಹಿಸಿದ್ದ ನಟಿ ಆಲಿಯಾ ಭಟ್. 
ಸಾಮನ್ಯವಾಗಿ ವೈಯಕ್ತಿಕ ಜೀವನವನ್ನು ಹೆಚ್ಚು ಬಿಚ್ಚಿಡದ ನಟಿ, ನೇಹಾ ಧೂಪಿಯಾ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಅತ್ಯುತ್ತಮ 'ಕಿಸ್ಸರ್' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. 
ನಟ ಅರ್ಜುನ್ ಕಪೂರ್ ಅವರು ನಿಮಗೆ 'ಅತ್ಯುತ್ತಮ ಕಿಸ್ಸರ್' ಬಿರುದು ನೀಡಿದ್ದಾರೆ ಎಂದು ನೇಹಾ ಹೇಳಿದಾಗ, ಆಲಿಯಾ ಆ ಬಿರುದನ್ನು ನಟ ಸಿದ್ಧಾರ್ಥ್ ಮಲಹೋತ್ರ ಅವರಿಗೆ ನೀಡುವುದಾಗಿ ಹೇಳಿದ್ದಾರೆ. ನಕ್ಕು ಮಾತು ಮುಂದುವರೆಸಿದ ಆಲಿಯಾ "ನೋಡಿ. ನಾನು ಅರ್ಜುನ್ ಅವರನ್ನು ಒಂದು ಸಿನೆಮಾದಲ್ಲಿ ಚುಂಬಿಸಿದ್ದೇನೆ ಅವರು ಕೂಡ ಒಳ್ಳೆಯ ಕಿಸ್ಸರ್ ಆದರೆ ಸಿದ್ ಅವರನ್ನು ನಾನು ಎರಡು ಸಿನೆಮಾಗಳಲ್ಲಿ ಚುಂಬಿಸಿದ್ದೇನೆ, ಆದುದರಿಂದ ಅವರ ಜೊತೆಗೆ ಹೆಚ್ಚು ತರಬೇತಿ ಇತ್ತು. ಆದುದರಿಂದ ಅವರಿಗೆ ಈ ಪ್ರಶಸ್ತಿ ಕೊಡುವುದು ಸೂಕ್ತ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.