ಬಾಲಿವುಡ್

ಯುವರಾಜ್ ಸಿಂಗ್ ಮದುವೆ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿಯ ಹೆಸರು ನರೇಂದರ್ ಮೋದಿ

ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ತಮ್ಮ ಮದುವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು...

ಯುವರಾಜ್ ಸಿಂಗ್ ಮದುವೆ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿಯ ಹೆಸರು ನರೇಂದರ್ ಮೋದಿ
ಯುವರಾಜ್ ಸಿಂಗ್, ಬಲ ಚಿತ್ರದಲ್ಲಿ ಆಹ್ವಾನ ಪತ್ರಿಕೆಯಲ್ಲಿ ತಪ್ಪಾಗಿ ಪ್ರಿಂಟ್ ಆದ ಪ್ರಧಾನಿ ಮೋದಿಯವರ ಹೆಸರು
Published On :
ನವದೆಹಲಿ: ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ತಮ್ಮ ಮದುವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ನಿನ್ನೆ ಸಂಸತ್ತಿಗೆ ಭೇಟಿ ನೀಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. 
ಇದೇ 30ರಂದು ಬಾಲಿವುಡ್ ನಟಿ ಹಜೆಲ್ ಕೀಚ್ ಅವರನ್ನು ಮದುವೆಯಾಗಲಿರುವ ಯುವರಾಜ್ ಸಿಂಗ್ ಪ್ರಧಾನಿಯವರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ತಪ್ಪಾಗಿ ನರೇಂದರ್ ಮೋದಿ ಎಂದು ಪ್ರಿಂಟಿಸಿದ್ದಾರೆ.
ಇದು ಬೇರೆ ಯಾರೋ ಟೈಪ್ ಮಾಡುವಾಗ ಆದ ತಪ್ಪಾದರೂ ಕೂಡ ಸೆಲೆಬ್ರಿಟಿಗಳ ಹೈ ಪ್ರೊಫೈಲ್ ಮದುವೆಯಾಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.
ಯುವರಾಜ್ ಸಿಂಗ್ ಅವರು ಚಂಡೀಗಢದ ಗುರುದ್ವಾರದಲ್ಲಿ ನವೆಂಬರ್ 30ರಂದು ಹಜೆಲ್ ಅವರನ್ನು ವರಿಸಲಿದ್ದು ನಂತರ ಡಿಸೆಂಬರ್ 2ರಂದು ಹಿಂದೂ ಸಂಪ್ರದಾಯದ ಪ್ರಕಾರ ಗೋವಾದಲ್ಲಿ ಮದುವೆಯಾಗಲಿದ್ದಾರೆ. ದೆಹಲಿಯಲ್ಲಿ ಡಿಸೆಂಬರ್ 5 ಮತ್ತು 7ರಂದು ಸಂಗೀತ ಮತ್ತು ಆರತಕ್ಷತೆ ನೆರವೇರಲಿದೆ.
ಯುವರಾಜ್ ಸಿಂಗ್ ಮತ್ತು ಹಜೆಲ್ ಕೀಚ್ ಅವರು ಫರಾನ್ ಖಾನ್ ಅವರ ಸಂಗೀತಕ್ಕೆ ಹೆಜ್ಜೆ ಹಾಕಲಿದ್ದಾರಂತೆ. ಇತ್ತೀಚೆಗೆ ಫರಾನ್ ಖಾನ್ ಸಾನಿಯಾ ಮಿರ್ಜಾ ಅವರ ಸೋದರಿಯ ಮದುವೆಗೆ ನೃತ್ಯಕ್ಕೆ ಸಂಗೀತ ಸಂಯೋಜಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.