25 ವರ್ಷಗಳು ಕಳೆದರೂ ಇನ್ನೂ ಹೊಸಬ ಎಂದು ಭಾಸವಾಗುತ್ತದೆ: ಶಾರೂಕ್ ಖಾನ್
ಕಲೆ ಮುಖ್ಯವೇ ಹೊರತು ಕಲಾವಿದನಲ್ಲ ಎಂದು ನಾನು ನಂಬುತ್ತೇನೆ. ಒಬ್ಬ ನಟ ನೀರಿನಂತೆ. ಅದಕ್ಕೆ...

Published On :
ಮುಂಬೈ: ಕಲೆ ಮುಖ್ಯವೇ ಹೊರತು ಕಲಾವಿದನಲ್ಲ ಎಂದು ನಾನು ನಂಬುತ್ತೇನೆ. ಒಬ್ಬ ನಟ ನೀರಿನಂತೆ. ಅದಕ್ಕೆ ಅವನು ಬಣ್ಣ ಮತ್ತು ಆಕಾರ ತುಂಬಬೇಕು. ಕಲೆ ಮುಖ್ಯವೇ ಹೊರತು ಕಲಾವಿದನಲ್ಲ ಎಂದು ನಂಬುವವನು ನಾನು. ನಾನು ಹಾಗೆ ಭಾವಿಸಿದರೆ ಪರಿಶುದ್ಧ ಮನಸ್ಸಿನಿಂದ ಕೆಲಸ ಮಾಡಬಹುದು ಎಂದು ನಾನು ತಿಳಿದುಕೊಳ್ಳುತ್ತೇನೆ. ನನ್ನ ಕಲೆ ನನಗಿಂತ ಮುಖ್ಯ ಎಂದು ನಾನು ಭಾವಿಸಿದರೆ ಆ ಪರಿಶುದ್ಧವನ್ನು ನಾನು ಗಳಿಸಬಹುದು ಎಂದು ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹೇಳಿದ್ದಾರೆ. ಕುಚ್ ಮೀಟಾ ಹೊ ಜಾಯೆ ನಿರ್ದೇಶಕ ಸಮರ್ ಖಾನ್ ಅವರು ಶಾರೂಕ್ ಖಾನ್ ಬಗ್ಗೆ ಬರೆದ ಜೀವನ ಚರಿತ್ರೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಂಗ್ ಖಾನ್ ಹೀಗೆ ಹೇಳಿದರು.
25 ವರ್ಷಗಳ ಹಿಂದೆ ದೆಹಲಿಯಿಂದ ಬಂದು ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದು ಆಗ ನನಗೆ ಬಹಳ ದೊಡ್ಡ ಕನಸಾಗಿತ್ತು. ಆ ಸಮಯದಲ್ಲಿ ನನ್ನಲ್ಲಿ ತುಂಬಾ ಉತ್ಸಾಹ ತುಂಬಿತ್ತು. ಇಷ್ಟು ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಪಟ್ಟ ಶ್ರಮ, ಕಂಡ ಏರಿಳಿತ, ನನ್ನ ಮೇಲೆ ನಂಬಿಕೆ ಇಟ್ಟ ನಿರ್ಮಾಪಕರು, ನಿರ್ದೇಶಕರಿಗೆ ಈ ಪುಸ್ತಕವನ್ನು ಸಮರ್ಪಿಸುತ್ತೇನೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದರು ಶಾರೂಕ್ ಖಾನ್.
ತಮ್ಮ ಆರಂಭದ ದಿನಗಳನ್ನು ನೆನೆಸಿಕೊಂಡ ಅವರು, ನಾನು ನೋಡಲು ವಿಲಕ್ಷಣನಾಗಿದ್ದೆ. ನಾನು ಚಲನಚಿತ್ರರಂಗದ ಹಿನ್ನೆಲೆಯಿಂದ ಬಂದವನಲ್ಲ. ಆದರೆ ನನಗೆ ನಿರ್ಮಾಪಕರು, ನಿರ್ದೇಶಕರು ಅವಕಾಶ ನೀಡಿದರು. ಹಾಗಾಗಿ ಇಂದು ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶಿಸುವವರನ್ನು ನಾನು ಗೌರವಿಸುತ್ತೇನೆ ಹಾಗೂ ಪ್ರೀತಿಸುತ್ತೇನೆ.
ನಾನು ಇಂದು ಸ್ಟಾರ್ ಆದರೂ ಕೂಡ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನನಗೆ ಸಿಗುವ ಆಯ್ಕೆಗಳು ಕಡಿಮೆ. ನಾನು ಹಲವು ನಿರ್ದೇಶಕರನ್ನು ಭೇಟಿ ಮಾಡುತ್ತೇನೆ, ಆದರೆ ಕೆಲವು ಬಾರಿ ಅವಕಾಶಗಳು ನಮ್ಮ ಕೈ ತಪ್ಪಿ ಹೋಗುತ್ತವೆ. ಸಿನಿಮಾ ಕ್ಷೇತ್ರದಲ್ಲಿ ನಾನು 25 ವರ್ಷಗಳನ್ನು ಕಳೆದರೂ ಕೂಡ ಇಂದಿಗೂ ನಾನು ಹೊಸಬ ಎಂದೇ ಭಾವಿಸುತ್ತೇನೆ ಎನ್ನುತ್ತಾರೆ ಶಾರೂಕ್.
25 years of life ಎಂದು ಪುಸ್ತಕದ ಹೆಸರಾಗಿದ್ದು ಅದರಲ್ಲಿ ಶಾರೂಕ್ ಖಾನ್ ಅವರ ಸಿನಿ ಜೀವನದ ಆಸಕ್ತಿಕರ ವಿಷಯಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


