ಬಾಲಿವುಡ್

ಮಾಜಿ ನೀಲಿ ತಾರೆ​ ಸನ್ನಿಯ ಸುಖೀ ದಾಂಪತ್ಯದ ಗುಟ್ಟು ಏನು ಗೊತ್ತಾ?

ಇತ್ತೀಚಿಗೆ ತಾರಾ ದಂಪತಿಗಳ ದಾಂಪತ್ಯದಲ್ಲಿ ವಿರಸ ಮೂಡಿ ವಿಚ್ಛೇಧನ ಹೆಚ್ಚುತ್ತಿರುವ ಸಂದರ್ಭದಲ್ಲೇ ಮಾಜಿ ನೀಲಿ ತಾರೆ, ಹಾಲಿ ಬಾಲಿವುಡ್‌ ...

ಮಾಜಿ ನೀಲಿ ತಾರೆ​ ಸನ್ನಿಯ ಸುಖೀ ದಾಂಪತ್ಯದ ಗುಟ್ಟು ಏನು ಗೊತ್ತಾ?
ಸನ್ನಿ ಲಿಯೋನ್ - ಡೇನಿಯಲ್‌ ವೆಬರ್‌
Published On :
ಮುಂಬೈ: ಇತ್ತೀಚಿಗೆ ತಾರಾ ದಂಪತಿಗಳ ದಾಂಪತ್ಯದಲ್ಲಿ ವಿರಸ ಮೂಡಿ ವಿಚ್ಛೇಧನ ಹೆಚ್ಚುತ್ತಿರುವ ಸಂದರ್ಭದಲ್ಲೇ ಮಾಜಿ ನೀಲಿ ತಾರೆ, ಹಾಲಿ ಬಾಲಿವುಡ್‌ ನ‌ಟಿ ಸನ್ನಿ ಲಿಯೋನ್ ಅವರು ತಮ್ಮ ಯಶಸ್ವಿ ದಾಂಪತ್ಯದ ಗುಟ್ಟು ರಟ್ಟು ಮಾಡಿದ್ದಾರೆ.
ಸದ್ಯ ಬಾಲಿವುಡ್‌ನ‌ ಬಹುಬೇಡಿಕೆಯ ನಟಿಯಾಗಿರುವ ಸೆಕ್ಸಿ ತಾರೆ ಸನ್ನಿ ಲಿಯೋನ್ ವಿವಾಹಿತೆಯೂ ಆಗಿದ್ದು, ತನ್ನ ದಾಂಪತ್ಯದ ಯಶಸ್ಸಿಗೆ ನಂಬಿಕೆ ಮತ್ತು ರಾಜಿ ಕಾರಣ ಎಂದು ಹೇಳಿದ್ದಾರೆ. 
ಐಎಎನ್‌ಎಸ್‌ ಸುದ್ದಿ ಸಂಸ್ಥೆ ದೂರವಾಣಿ ಮೂಲಕ ನಿಮ್ಮ ಯಶಸ್ವಿ ದಾಂಪತ್ಯದ ಗುಟ್ಟೇನು ಎಂದು ಕೇಳಿದಾಗ ಉತ್ತರಿಸಿದ ಸನ್ನಿ, 'ನಂಬಿಕೆ ಮತ್ತು ರಾಜಿ ದಾಂಪತ್ಯದ ಮುಖ್ಯ ಗುಟ್ಟು' ಎಂದಿದ್ದಾರೆ.
'ಹ್ಯಾಪೀ ವೈಫ್ ,ಹ್ಯಾಪೀ ಲೈಪ್‌ ಎನ್ನುವುದರಲ್ಲಿ ನಾನು ನಂಬಿಕೆ ಇರಿಸಿದ್ದೇನೆ.ದಾಂಪತ್ಯ ದಲ್ಲಿ ಪ್ರಮುಖವಾಗಿ ಪರಸ್ಪರ ನಂಬಿಕೆ, ಪರಸ್ಪರ ಸಂವಹನ ,ರಾಜಿ ಮತ್ತು ಬೇಷರತ್‌ ಪ್ರೀತಿ ಮುಖ್ಯವಾಗುತ್ತದೆ' ಎಂದು ಹೇಳಿದ್ದಾರೆ.
ಫೋನ್‌ ಮಾತುಕತೆ ವೇಳೆ ಏಕ್‌ ಪೆಹಲಿ ಲೀಲಾದ ತಾರೆ ಸನ್ನಿ ಸುಖೀ ದಾಂಪತ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು 'ರಾಜಿ' ಎಂದು ಒತ್ತಿ ಹೇಳಿದ್ದಾರೆ.
ಸನ್ನಿ 2009 ರಲ್ಲಿ ಡೇನಿಯಲ್‌ ವೆಬರ್‌ ಅವರನ್ನು ವಿವಾಹವಾಗಿದ್ದು 7 ವರ್ಷ ಗಳ ದಾಂಪತ್ಯ ಜೀವನದ ಅನುಭವ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.