ಕಾನ್ ಉತ್ಸವದಲ್ಲಿ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿ ಗೇಲಿಗೊಳಗಾದ ಐಶ್ವರ್ಯ ರೈ
ಕಾನ್ ಸಿನಿಮೋತ್ಸವದಲ್ಲಿ ‘ಸರಬ್ಜಿತ್ ಚಿತ್ರದ ಪ್ರದರ್ಶನಕ್ಕೆ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡು ಬಂದಿದ್ದ ನಟಿ ಐಶ್ವರ್ಯಾ ರೈ ಅವರು ಸಾಮಾಜಿಕ ಜಾಲತಾಣ ‘ಟ್ವಿಟರ್’ನಲ್ಲಿ ...

ಕಾನ್: ಕಾನ್ ಸಿನಿಮೋತ್ಸವದಲ್ಲಿ ‘ಸರಬ್ಜಿತ್ ಚಿತ್ರದ ಪ್ರದರ್ಶನಕ್ಕೆ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡು ಬಂದಿದ್ದ ನಟಿ ಐಶ್ವರ್ಯಾ ರೈ ಅವರು ಸಾಮಾಜಿಕ ಜಾಲತಾಣ ‘ಟ್ವಿಟರ್’ನಲ್ಲಿ ಗೇಲಿಗೊಳಗಾಗಿದ್ದಾರೆ.
ಹೂವಿನ ಚಿತ್ತಾರದ ‘ರಮಿ ಕಡಿ’ ಡ್ರೆಸ್ ತೊಟ್ಟಿದ್ದ ಐಶ್ವರ್ಯಾ, ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡಿದ್ದರು. ಇದಕ್ಕೆ ಟ್ವಿಟರ್ ಬಳಕೆದಾರರು ಲೇವಡಿ ಮಾಡಿದ್ದಾರೆ.
ಕಾನ್ ಉತ್ಸವದ ‘ಕೆಂಪು ಹಾಸಿನ ಮೇಲೆ ನಡೆಯಲು ಹೋಗುವ ಮುನ್ನ ಐಶ್ವರ್ಯಾ ತುಂಬಾ ಜಾಮೂನುಗಳನ್ನು ತಿಂದಿದ್ದರು ಎನಿಸುತ್ತದೆ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಏಷ್ಯನ್ ಪೇಂಟ್ಸ್‌ನವರು ನಿಮ್ಮ ತುಟಿಗಳ ಪ್ರಾಯೋಜಕತ್ವ ಯಾವಾಗ ವಹಿಸಿಕೊಂಡಿದ್ದು? ಎಂದು ಮತ್ತೊಬ್ಬ ಟ್ವಿಟರಿಗ ಲೇವಡಿ ಮಾಡಿದ್ದಾರೆ.
‘ಐಶ್ವರ್ಯಾ ಕಾನ್‌ಗೆ ತೆರಳುವ ಮುನ್ನ ‘ಸ್ಮರ್ಫ್’ ಅನ್ನು (ಕಾರ್ಟೂನ್ ನಲ್ಲಿ ಬರುವ ನೀಲಿ ಬಣ್ಣದ ಪ್ರಾಣಿ) ಚುಂಬಿಸಿದ್ದರು ಎನಿಸುತ್ತದೆ’ ಎಂದು ಗೇಲಿ ಮಾಡಿದ್ದಾರೆ.
ಐಶ್ವರ್ಯಾ ಅವರ ಅಲಂಕಾರವನ್ನು ನಗರದ ಸಿರಿತನ ಮತ್ತು ಬಡತನದ ಸಂಕೇತ ಎಂದು ಒಬ್ಬರು ಲೇವಡಿ ಮಾಡಿದ್ದಾರೆ.
‘ನಗರ ಸಿರಿವಂತಿಕೆ: ಐಶ್ವರ್ಯಾ ತುಟಿಗಳು ಬ್ಲಾಕ್ ಕರೆಂಟ್ ಐಸ್‌ಕ್ರೀಮ್ ಬಳಿದುಕೊಂಡಂತೆ ಕಾಣಿಸುತ್ತದೆ.
ನಗರ ಬಡತನ: ಐಶ್ವರ್ಯಾ ತುಟಿಗಳು ಆಕೆ ಕಾಲಾ ಖಟ್ಟಾ ಗೋಲಾವನ್ನು ತಿಂದಿದ್ದಾರೆ ಎನಿಸುವಂತಿದೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.
ಆ ನೇರಳೆ ಬಣ್ಣದ ಲಿಪ್‌ಸ್ಟಿಕ್ ಹಚ್ಚಿದ ಆಕೆಯ ಮೇಕಪ್ ಕಲಾವಿದನನ್ನು ವಜಾ ಮಾಡುವಂತೆ ಐಶ್ವರ್ಯಾ ರೈಗೆ ಅರ್ಜಿ ಸಲ್ಲಿಸುತ್ತೇನೆ’ ಎಂದು ಅಭಿಮಾನಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಐಶ್ವರ್ಯ ರೈ ಹಚ್ಚಿಕೊಂಡಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ಆಕೆಯ ಅಭಮಾನಿಗಳಿಗೆ ತುಸು ಇರುಸು ಮುರಿಸು ಉಂಟು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


