ಬಾಲಿವುಡ್

ರೂಪದರ್ಶಿಯರು ನಟಿಸಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಪ್ರಿಯಾಂಕಾ, ದೀಪಿಕಾ ಮುರಿದಿದ್ದಾರೆ: ವಲುಸ್ಚ ಡಿ ಸೋಜ

ಬಾಲಿವುಡ್ ನಟಿಯರಲ್ಲಿ ಸದ್ಯ ಅಗ್ರಗಣ್ಯ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಬಗ್ಗೆ ರೂಪದರ್ಶಿ ಹಾಗೂ ಬಾಲಿವುಡ್ ...

ರೂಪದರ್ಶಿಯರು ನಟಿಸಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಪ್ರಿಯಾಂಕಾ, ದೀಪಿಕಾ ಮುರಿದಿದ್ದಾರೆ: ವಲುಸ್ಚ ಡಿ ಸೋಜ
ವಲುಸ್ಚ ಡಿ ಸೋಜ
Published On :

ನವದೆಹಲಿ: ಬಾಲಿವುಡ್ ನಟಿಯರಲ್ಲಿ ಸದ್ಯ ಅಗ್ರಗಣ್ಯ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಬಗ್ಗೆ ರೂಪದರ್ಶಿ ಹಾಗೂ ಬಾಲಿವುಡ್ ನಟಿ ವಲುಸ್ಚ ಡಿ ಸೋಜ ಹೊಗಳಿದ್ದು, ಮಾಡೆಲ್ ಗಳು ನಟನೆ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಈ ಇಬ್ಬರು ನಾಯಕಿಯರು ಸುಳ್ಳಾಗಿಸಿದ್ದಾರೆ ಎಂದು ಹೇಳಿದ್ದಾರೆ.

ರೂಪದರ್ಶಿಯಾಗಿ ವೃತ್ತಿ ಜೀವನ ಆರಂಭಿಸಿದ ವಲುಸ್ಚ ಇತ್ತೀಚೆಗೆ ತೆರೆಕಂಡ ಶಾರೂಕ್ ಖಾನ್ ರ ಫ್ಯಾನ್ ಚಿತ್ರದ ಮೂಲಕ ಬಾಲಿವುಡ್ ಸಿನಿಮಾಗೆ ಪಾದಾರ್ಪಣೆ ಮಾಡಿದ್ದಾರೆ. ಮಾಡೆಲಿಂಗ್ ನಿಂದ ನಟನೆ ವೃತ್ತಿಗೆ ಪಾದಾರ್ಪಣೆ ಮಾಡಿದ ಗಳಿಗೆ ನಿಜಕ್ಕೂ ಅದ್ಭುತ. ತಮಗೆ ಇದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಅನೇಕ ಯುವತಿಯರು ಮಾಡೆಲಿಂಗ್ ನ್ನು ಬಾಲಿವುಡ್ ಪ್ರವೇಶಕ್ಕೆ ಮೆಟ್ಟಿಲಾಗಿ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಇದಕ್ಕೆ ಉದಾಹರಣೆ. ನನಗೆ ಇದು ಒಂದು ದೊಡ್ಡ ಪರಿವರ್ತನೆ. ನನ್ನ ಸದ್ಯದ ವೃತ್ತಿಜೀವನದ ಬಗ್ಗೆ ಸಂತೋಷವಿದೆ ಎಂದು ಸುದ್ದಿಸಂಸ್ಥೆಗೆ ಹೇಳಿಕೊಂಡಿದ್ದಾರೆ.

ತನಗೆ ನಟನೆ ಎಂಬುದು ಯಾವಾಗಲೂ ಅನುರಾಗದ ಭಾವವಿದೆ. ಮೊದಲ ಚಿತ್ರ ಫ್ಯಾನ್ ನಲ್ಲಿನ ನಟನೆಗೆ ವಲುಸ್ಚಾಗೆ ಪ್ರಶಂಸೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.