'ಡಿವೈನ್ ಲವರ್ಸ್'ನಲ್ಲಿ ಕಂಗನಾ ಬದಲಿಗೆ ಜರೀನ್
ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ನಟ ಇರ್ಫಾನ್ ಖಾನ್ ಎದುರು 'ಡಿವೈನ್ ಲವರ್ಸ್' ಸಿನೆಮಾದಲ್ಲಿ ನಟಿಸಲು ನಟಿ ಜರೀನ್ ಖಾನ್ ಅವರು ಆಯ್ಕೆಯಾಗಿದ್ದಾರೆ. ಸಾಯಿ ಕಬೀರ್ ನಿರ್ದೇಶನದ ಈ ಚಿತ್ರದಲ್ಲಿ

ಮುಂಬೈ: ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ನಟ ಇರ್ಫಾನ್ ಖಾನ್ ಎದುರು 'ಡಿವೈನ್ ಲವರ್ಸ್' ಸಿನೆಮಾದಲ್ಲಿ ನಟಿಸಲು ನಟಿ ಜರೀನ್ ಖಾನ್ ಅವರು ಆಯ್ಕೆಯಾಗಿದ್ದಾರೆ. ಸಾಯಿ ಕಬೀರ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸಲು ಮೊದಲು ರಾಷ್ಟ್ರ ಪ್ರಶಸ್ತಿ ವಿಜೇತ ಕಂಗನಾ ರಣಾವತ್ ಅವರಿಗೆ ಕೇಳಲಾಗಿತ್ತು.
ಈ ವಿಷಯವನ್ನು ಧೃಢೀಕರಿಸಿರುವ ಕಬೀರ್ "ಹೌದು ಇದು ನಿಜ. ಪಠಾನಿ ನೋಟ ಹೊಂದಿರುವ ನಟಿ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಾರೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇರ್ಫಾನ್ ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಕಂಗನಾ ಎದುರುನೋಡುತ್ತಿದ್ದರು ಆದರೆ ದಿನಾಂಕಗಳು ಹೊಂದಾಣಿಕೆಯಾಗದ ಕಾರಣ ಸಿನೆಮಾ ಚಿತ್ರೀಕರಣ ಮುಂದುವರೆಯಲಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಶಾಲ್ ಪಾಂಡ್ಯ ನಿರ್ದೇಶನದ 'ಹೇಟ್ ಸ್ಟೋರಿ-೩'ರಲ್ಲಿ ಕಾಣಿಸಿಕೊಂಡಿದ್ದ ಜರೀನ್ ಈಗ ಎರಡು ತಿಂಗಳ ತರಬೇತಿಯಲ್ಲಿ ಭಾಗಿಯಾಗಲಿದ್ದಾರಂತೆ. ಈ ಸಿನೆಮಾ ಸಾಹಸಮಯ ಹಾಸ್ಯಚಿತ್ರವಾಗಿದ್ದು ಸೆಪ್ಟಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


