ಪ್ರಿಯಾಂಕಾ ಚೋಪ್ರಾ ಟೈಮ್ಸ್ ನ ಅತ್ಯಂತ ಅಪೇಕ್ಷಿತ ಮಹಿಳೆ
2015ನೇ ಸಾಲಿನ ಟೈಮ್ಸ್ 50 ಅತ್ಯಂತ ಅಪೇಕ್ಷಿತ ಮಹಿಳೆಯರ (desirable women) ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ...

ಮುಂಬೈ: 2015ನೇ ಸಾಲಿನ ಟೈಮ್ಸ್ 50 ಅತ್ಯಂತ ಅಪೇಕ್ಷಿತ ಮಹಿಳೆಯರ (Times most desirable women) ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನ ಪಡೆದಿದ್ದಾರೆ. ಆನ್ ಲೈನ್ ಮೂಲಕ ಪಡೆದ ಮತಗಳು ಮತ್ತು ಆಯೋಜಕರ ಮತ ಪರಿಗಣಿಸಿ ಪಟ್ಟಿ ತಯಾರಿಸಲಾಗಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಟೈಮ್ ಮ್ಯಾಗಜೀನ್ ನಡೆಸುವ 100 ಪ್ರಮುಖ ಪ್ರಭಾವಿ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಆಸ್ಕರ್ ಪ್ರಶಸ್ತಿ ವೇದಿಕೆ ಹಂಚಿಕೊಂಡಿದ್ದ, ತೀರಾ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಅಮೆರಿಕದ ಕ್ವಾಂಟಿಕೋ ಟಿವಿ ಸಿರೀಸ್ ನಲ್ಲಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ ಪ್ರಿಯಾಂಕ, ಹಾಲಿವುಡ್ ಸಿನಿಮಾ ಬೇವಾಚ್ ನಲ್ಲಿ ಸಹ ನಟಿಸಿದ್ದಾರೆ. ಟೈಮ್ಸ್ ಮ್ಯಾಗಜಿನ್ ನ ಅರ್ಹ ಮಹಿಳೆ ಎಂದು ಗುರುತಿಸಿಕೊಂಡು ಪ್ರಿಯಾಂಕ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.
ಅವರ ನಂತರ ದೀಪಿಕಾ ಪಡುಕೋಣೆ ಮತ್ತು ಸನ್ನಿ ಲಿಯೋನ್ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


