ಬಾಲಿವುಡ್

ಅವಳ ಎಲ್ಲ ಕಾನೂನು ಹೋರಾಟಗಳಲ್ಲಿ ಜೊತೆಗೆ ನಿಲ್ಲುತ್ತೇನೆ: ಕಂಗನಾ ತಂದೆ

ಬಾಲಿವುಡ್ ನಟ ಹೃತಿಕ್ ರೋಶನ್ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ಕಾನೂನು ಸಮರ ನಡೆಸುತ್ತಿರುವ ಹಿನ್ನಲೆಯಲ್ಲಿ ನಟಿಯ ತಂದೆ ಅಮರದೀಪ್ ರನೌತ್,

ಅವಳ ಎಲ್ಲ ಕಾನೂನು ಹೋರಾಟಗಳಲ್ಲಿ ಜೊತೆಗೆ ನಿಲ್ಲುತ್ತೇನೆ: ಕಂಗನಾ ತಂದೆ
ನಟಿ ಕಂಗನಾ ರನೌತ್
Published On :

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಶನ್ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ಕಾನೂನು ಸಮರ ನಡೆಸುತ್ತಿರುವ ಹಿನ್ನಲೆಯಲ್ಲಿ ನಟಿಯ ತಂದೆ ಅಮರದೀಪ್ ರನೌತ್, ಮಗಳ ಎಲ್ಲ ಹೋರಾಟಗಳಲ್ಲೂ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಂಗನಾ ರನೌತ್ ಅದನ್ನು ಸ್ವೀಕರಿಸಲು ದೆಹಲಿಗೆ ಬಂದಾಗ ಅವರ ಕುಟುಂಬ ವರ್ಗದ ಜೊತೆಗೆ ಕಂಗನಾ ತಂದೆ ಕೂಡ ಜೊತೆಯಾಗಿದ್ದರು.

ಮಗಳ ಯಶಸ್ಸು ಮತ್ತು ಹೃತಿಕ್ ರೋಶನ್ ಜೊತೆಗಿನ ಕಾನೂನು ಸಮರದ ಬಗ್ಗೆ ಪ್ರತಿಕ್ರಿಯಿಸಿದ ಅಮರದೀಪ್ "ನನ್ನ ಮಗಳ ಸಾಧನೆಗಳ ಬಗ್ಗೆ ನನಗೆ ಹೆಮ್ಮೆಯಿದೆ. ಅವಳು ಜೀವನದ ಎಲ್ಲ ಆಯಾಮಗಳಲ್ಲೂ ಧೈರ್ಯ ತೋರಿದ್ದಾಳೆ ಮತ್ತು ಅವಳ ಕಾನೂನು ಸಮರದಲ್ಲೂ ಜೊತೆಗೆ ನಿಲ್ಲುತ್ತೇನೆ" ಎಂದಿದ್ದಾರೆ.

ಹೃತಿಕ್ ಅವರು ತಮ್ಮ ಹಳೆಯ ಬಾಯ್ ಫ್ರೆಂಡ್ ಆಗಿದ್ದರು ಎಂಬ ರೀತಿಯಲ್ಲಿ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಕಂಗನ "ಹಳೆಯ ಗೆಳೆಯರು ಗಮನ ಸೆಳೆಯಲು ತಿಕ್ಕಲು ಕೆಲಸಗಳನ್ನೇಕೆ ಮಾಡುತ್ತಾರೆ" ಎಂಬ ಹೇಳಿಕೆಯ ನಂತರ ಇಬ್ಬರೂ ನಟರ ನಡುವಿನ ಕಾಳಗ ತಾರಕಕ್ಕೇರಿ, ಪರಸ್ಪರ ಕಾನೂನು ನೋಟಿಸ್ ಗಳನ್ನು ಕಳುಹಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.