ಬಾಲಿವುಡ್

ರಣವೀರ್ ಸಿಂಗ್ ಗೆ `ವರ್ಷದ ಮಹಾರಾಷ್ಟ್ರಿಗ' ಪ್ರಶಸ್ತಿ

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಮರಾಠಾ ಯೋಧ ಪೇಶ್ವ ಬಾಜಿರಾವ್ 1 ಪಾತ್ರವನ್ನು...

ರಣವೀರ್ ಸಿಂಗ್ ಗೆ `ವರ್ಷದ ಮಹಾರಾಷ್ಟ್ರಿಗ' ಪ್ರಶಸ್ತಿ
ಬಾಲಿವುಡ್ ನಟ ರಣವೀರ್ ಸಿಂಗ್
Published On :

ಮುಂಬೈ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಮರಾಠಾ ಯೋಧ ಪೇಶ್ವ ಬಾಜಿರಾವ್ 1 ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದ ನಟ ರಣವೀರ್ ಸಿಂಗ್ ಗೆ ಶುಕ್ರವಾರ ವರ್ಷದ ಮಹಾರಾಷ್ಟ್ರಿಗ ಬಿರುದು ನೀಡಿ ಸನ್ಮಾನಿಸಲಾಗುತ್ತಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಈ ಪ್ರತಿಭಾನ್ವಿತ ನಟನಿಗೆ ಪ್ರಶಸ್ತಿ ನೀಡಿ ಗೌರವಿಸುವರು.
ತಮ್ಮ ಉತ್ತಮ ನಟನಾ ಪ್ರಾವಿಣ್ಯತೆ, ಅತೀವ ಉತ್ಸಾಹದಿಂದ 2015ರಲ್ಲ ಯಶಸ್ಸು ಕಂಡಿದ್ದಾರೆ. ಅವರ ಮೊದಲ ಚಿತ್ರ ಬಾಂಡ್ ಬಜಾ ಭಾರತ್ ಕೂಡ ಅತ್ಯಂತ ಯಶಸ್ಸನ್ನು ಕಂಡಿತ್ತು,

'ಲೋಕಮಾನ್ಯ ವರ್ಷದ ಮಹಾರಾಷ್ಟ್ರಿಗ' ಪ್ರಶಸ್ತಿಯನ್ನು ರಾಜ್ಯದ ಜನತೆ ಮೇಲೆ ಧನಾತ್ಮಕ ಅಂಶ ಬೀರಿದ ಮತ್ತು ಮಹಾರಾಷ್ಟ್ರವನ್ನು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದವರಿಗೆ ಪ್ರತಿ ವರ್ಷ ನೀಡಲಾಗುತ್ತದೆ.ಬಾಲಿವುಡ್ ನ ದಂತಕಥೆಗಳಾದ ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಅಂತವರಿಗೆ ಈ ಹಿಂದೆ ಈ ಪ್ರಶಸ್ತಿ ಲಭಿಸಿತ್ತು. ರಣವೀರ್ ಗೆ ಈಗ ಸಿಕ್ಕಿರುವುದು ಅವರ ಸಾಧನೆಗೆ ಇನ್ನಷ್ಟು ಗರಿ ಮೂಡಿಸಿದೆ.

ಮಹಾರಾಷ್ಟ್ರದ ಹೆಮ್ಮೆಯ ಪೇಶ್ವ ಬಾಜಿರಾವ್ ನ ಕಥೆಯಾದರಿಸಿದ ಐತಿಹಾಸಿಕ ಚಿತ್ರ ಬಾಜಿರಾವ್ ಮಸ್ತಾನಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.