'ಪೋಪ್ ಜೊತೆಗೆ ಸಂಬಂಧ' ಟ್ವೀಟ್ ನಿಂದ ಕಾನೂನು ತೊಡಕಿಗೆ ಸಿಲುಕಿದ ಹೃತಿಕ್
ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಪೋಪ್ ಮೇಲೆ ಮಾಡಿರುವ ಟ್ವೀಟ್ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ದೂರಿ ಮುಂಬೈ ನ ಕ್ರಿಶ್ಚಿಯನ್ ಜಾತ್ಯಾತೀತ ಸಮಿತಿ

ನವದೆಹಲಿ: ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಪೋಪ್ ಮೇಲೆ ಮಾಡಿರುವ ಟ್ವೀಟ್ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ದೂರಿ ಮುಂಬೈ ನ ಕ್ರಿಶ್ಚಿಯನ್ ಜಾತ್ಯಾತೀತ ಸಮಿತಿ ನಟನಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ.
ಮಾರ್ಚ್ ೨೮ ರಂದೇ ನೋಟಿಸ್ ಕಳುಹಿಸಿದ್ದರು, ನಟ ನೆನ್ನೆಯಷ್ಟೇ ಅದನ್ನು ಪಡೆದಿದ್ದಾರೆ ಎಂದು ಕ್ರಿಶ್ಚಿಯನ್ ಜಾತ್ಯಾತೀತ ಸಮಿತಿಯ ಅಬ್ರಹಾಂ ಮಿಥಾಯ್ ಹೇಳಿದ್ದರೆ.
ಆದರೆ ಸುದ್ದಿ ವಾಹಿನಿಯೊಂದರ ಪ್ರಕಾರ, ಹೃತಿಕ್ ವಕೀಲ ತಿಳಿಸಿರುವಂತೆ ನಟ ಇನ್ನು ಯಾವುದೇ ನೋಟಿಸ್ ಪಡೆದಿಲ್ಲ, ಆದರೆ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವುದಾದರೆ ಕ್ಷಮೆ ಕೋರಲು ಅವರು ಸಿದ್ಧರಿದ್ದಾರೆ ಎನ್ನಲಾಗಿದೆ.
ಹೃತಿಕ, ತಮ್ಮ ಗೆಳತಿ ಕಂಗನಾ ರನೌತ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದ ಸಂದರ್ಭದಲ್ಲಿ "ಮಾಧ್ಯಮಗಳು ಮಹಿಳೆಯ (ಅವರು ಅದ್ಭುತ ಮಹಿಳೆ ಎಂದು ನನಗೆ ತಿಳಿದಿದೆ) ನನ್ನ ಹೆಸರು ಬೆಸೆಯುತ್ತಿರುವ ಸಮಯದಲ್ಲಿ ಅವರ ಜೊತೆಗೆ ಅಫೇರ್ ಇಟ್ಟುಕೊಳ್ಳುವುದಕ್ಕಿಂತಲೂ ಪೋಪ್ ಜೊತೆಗೆ ಅಫೇರ್ ಬೆಳೆಸುವುದಕ್ಕೆ ಹೆಚ್ಚು ಸಾಧ್ಯತೆಯಿದೆ" ಎಂದು ಜನವರಿ ೨೮ರಂದು ಟ್ವೀಟ್ ಮಾಡಿದ್ದರು.
ಎರಡು ವಾರಗಳ ಹಿಂದೆಯಷ್ಟೇ ಹೃತಿಕ್ ಮತ್ತು ಕಂಗನ ಪರಸ್ಪರ ಟೀಕೆ ಮಾಡಿಕೊಂಡು, ಕಾನೂನು ನೋಟಿಸ್ ಗಳನ್ನು ಜಾರಿ ಮಾಡಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


