ಪತ್ರಕರ್ತನಿಗೆ ಕಪಾಳ ಮೋಕ್ಷ ಮಾಡಿದ ಸನ್ನಿ ಲಿಯೋನ್ : ಆರೋಪ ನಿರಾಕರಿಸಿದ ಪತಿ
ಅಸಭ್ಯವಾದ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರಿಗೆ ನಟಿ ಸನ್ನಿ ಲಿಯೋನ್ ಕಪಾಳ ಮೋಕ್ಷ ಮಾಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ..

ಸೂರತ್: ಅಸಭ್ಯವಾದ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರಿಗೆ ನಟಿ ಸನ್ನಿ ಲಿಯೋನ್ ಕಪಾಳ ಮೋಕ್ಷ ಮಾಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿದ್ದ ಹೋಳಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸನ್ನಿಲಿಯೋನ್ ಗುಜರಾತ್ ಗೆ ಆಗಮಿಸಿದ್ದರು. ಆಕೆ ಉಳಿದು ಕೊಂಡಿದ್ದ ಹೋಟೆಲ್ ನಲ್ಲಿ ಮಾಧ್ಯಮದವರು ಎದುರಾದರು. ಈ ವೇಳೆ ಪತ್ರಕರ್ತ ಎಂದು ಹೇಳಿಕೊಂಡ ಒಬ್ಬಾತ ಆಕೆಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ್ದಾನೆ.
ನೀವು ಹಿಂದೆ ಪಾರ್ನ್ ಸ್ಟಾರ್ ಆಗಿದ್ದವರು, ಈಗ ಬಾಲಿವುಡ್ ನಲ್ಲಿ ನಟಿಸುತ್ತಿದ್ದಿರಿ. ಒಂದು ರಾತ್ರಿಗೆ ಹಿಂದೆ ಎಷ್ಟು ಹಣ ಚಾರ್ಜ್ ಮಾಡುತ್ತಿದ್ದೀರಿ. ಈಗ ಎಷ್ಟು ಚಾರ್ಜ್ ಮಾಡುತ್ತೀರಾ ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಸನ್ನಿಲಿಯೋನ್ ಎಲ್ಲರ ಎದುರೇ ಆತನ ಕಪಾಳಕ್ಕೆ ಬಾರಿಸಿ ಎದ್ದು ಹೋಗಿದ್ದಾಳೆ ಎಂದು ಆಂಗ್ಲ ವೆಬ್ ಸೈಟ್ ಗಳು ವರದಿ ಮಾಡಿವೆ.
ಇನ್ನು ಕುಡಿದು ಬಂದ ವ್ಯಕ್ತಿಯೊಬ್ಬ ಆಕೆಯ ರೂಮಿಗೆ ನುಗ್ಗಿ ಸನ್ನಿ ಲಿಯೋನ್ ಜೊತೆ ಅನುಚಿತವಾಗಿ ವರ್ತಿಸಿದ ಎಂದು ಸಹ ವರದಿ ಮಾಡಲಾಗಿದೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸನ್ನಿ ಪತಿ ಡೇನಿಯಲ್ ಹೆಬ್ಬರ್, ಈ ವರದಿಗಳೆಲ್ಲಾ ಸುಳ್ಳು. ಸನ್ನಿ ಯಾಕ ಕಪಾಳಕ್ಕೂ ಹೊಡೆದಿಲ್ಲ. ಆಕೆ ಹೆಸರಿಗೆ ಹಾಗೂ ವೃತ್ತಿ ಜೀವನಕ್ಕೆ ಧಕ್ಕೆ ತರುವ ಸಲುವಾಗಿ ಈ ರೀತಿ ಅಪ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಇನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಆಕೆಯ ಕೊಠಡಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಸನ್ನಿ ಲಿಯೋನ್ ಜೊತೆ ಸುಮಾರು 50 ಜನ ಬೌನ್ಸರ್ ಗಳು ಆಕೆಯ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಅವರ ಕಣ್ತಪ್ಪಿಸಿ ಯಾವ ವ್ಯಕ್ತಿಯು ಆಕೆಯ ಕೋಣೆಯ ಒಳಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಪತ್ರಕರ್ತನ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಪ್ರಕರಣ ದಾಖಲಿಸಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


