ಬಾಲಿವುಡ್

ಸುಶಾಂತ್ ಸಿಂಗ್-ಅಂಕಿತಾ ಲೋಖಂಡೆ ಸಂಬಂಧದಲ್ಲಿ ಬಿರುಕು?

ಈ ವರ್ಷ ಸೆಲೆಬ್ರಿಟಿಗಳ ಬ್ರೇಕಪ್ ಸುದ್ದಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದಕ್ಕೆ ಲೇಟೆಸ್ಟ್ ಸೇರ್ಪಡೆ...

ಸುಶಾಂತ್ ಸಿಂಗ್-ಅಂಕಿತಾ ಲೋಖಂಡೆ ಸಂಬಂಧದಲ್ಲಿ ಬಿರುಕು?
ಸುಶಾಂತ್ ಸಿಂಗ್ ರಾಜ್ ಪೂತ್ ಮತ್ತು ಅಂಕಿತಾ ಲೋಖಂಡೆ
Published On :

ನವದೆಹಲಿ: ಈ ವರ್ಷ ಸೆಲೆಬ್ರಿಟಿಗಳ ಬ್ರೇಕಪ್ ಸುದ್ದಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಸುಶಾಂತ್ ಸಿಂಗ್ ರಾಜ್ ಪೂತ್ ಮತ್ತು ಅಂಕಿತ ಲೋಖಂಡೆ.
ಈ ಜೋಡಿ ವರ್ಷಾಂತ್ಯಕ್ಕೆ ಮದುವೆಯಾಗುತ್ತಾರೆಂಬ ಸುದ್ದಿ ಕೆಲ ದಿನಗಳ ಹಿಂದೆಯವರೆಗೂ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಇದೀಗ ಬ್ರೇಕಪ್ ಆಗಿದ್ದಾರೆ ಅನ್ನೋ ರೂಮರ್ ಕೇಳಿಬರುತ್ತಿದೆ.
 ಸುಶಾಂತ್ ಮತ್ತು ಅಂಕಿತಾ ಕಳೆದ ಆರು ವರ್ಷಗಳಿಂದ ಲಿವ್ ಇನ್ ರಿಲೇಶನ್ ಷಿಪ್ ನಲ್ಲಿದ್ದರು. ಆದರೆ ಈಗ ದೂರವಾಗಿದ್ದಾರೆ ಅನ್ನೋ ವಿಷಯ ಕೇಳಿಬರುತ್ತಿದೆ. ಇವರಿಬ್ಬರು ದೂರವಾಗಲು ಹಾಗಾದರೆ ಕಾರಣವೇನು? ಅಂತ ಹುಡುಕಿದರೆ ಸುಶಾಂತ್ ನ ಶುದ್ಧ್ ದೇಸಿ ಕೋ ಸ್ಟಾರ್ ಪರಿಣೀತಿ ಛೋಪ್ರಾ ಅಂತ ಪತ್ರಿಕೆಯೊಂದು ವರದಿ ಮಾಡಿದೆ.ಸಿನಿಮಾ ಬಂದ ಮೇಲೆ ಸುಶಾಂತ್ ಪರಿಣೀತಿ ಜೊತೆ ತುಂಬಾ ಹತ್ತಿರವಾಗತೊಡಗಿದನಂತೆ.ಅದು ಅಂಕಿತಾಗೆ ಇರಿಸುಮುರುಸು,ಬೇಸರ ತರಿಸಿದೆಯಂತೆ.
 
ಈ ಜೋಡಿ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು ಝೀ ಸಿನಿ ಅವಾರ್ಡ್ ಫಂಕ್ಷನ್ ನಲ್ಲಿ. ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಗಾಥೆ ಆಧರಿಸಿದ ಚಿತ್ರ ಎಂಎಸ್ ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರದ ಪ್ರಮೋಶನ್ ನಲ್ಲಿ ಸುಶಾಂತ್ ಸಿಂಗ್ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.