ರಜನಿಕಾಂತ್ '೨.೦'ಸಿನೆಮಾದ ವಿಜ್ಞಾನಿ ಪಾತ್ರದಲ್ಲಿ ಅಕ್ಷಯ್ ಕುಮಾರ್
ರಜನಿಕಾಂತ್ ನಟನೆಯ ಸೈನ್ಸ್ ಫಿಕ್ಷನ್- ಆಕ್ಷನ್ ಥ್ರಿಲ್ಲರ್ ಸಿನೆಮಾ '೨.೦' ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ

ನವದೆಹಲಿ: ರಜನಿಕಾಂತ್ ನಟನೆಯ ಸೈನ್ಸ್ ಫಿಕ್ಷನ್- ಆಕ್ಷನ್ ಥ್ರಿಲ್ಲರ್ ಸಿನೆಮಾ '೨.೦' ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದು, ವಿಜ್ಞಾನಿಯ ಪಾತ್ರ ಮಾಡಲಿದ್ದಾರಂತೆ.
"ತಮ್ಮ ಪರೀಕ್ಷೆಗಳು ವಿಫಲವಾಗಿ, ಹುಚ್ಚನಂತಾಗಿ ಕಾಣೆಯಾಗುವ ವಿಜ್ಞಾನಿಯ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಲಿದ್ದಾರೆ. ಇದಕ್ಕಾಗಿ ಅಕ್ಷಯ್ ತಮ್ಮ ನೋಟವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಬುಧವಾರ ಅಕ್ಷಯ್ ಅವರ ವಿಜ್ಞಾನಿ ಅವತಾರದ ಫೋಟೋಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ದೆಹಲಿಯಲ್ಲಿ ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದ್ದು "ಮುಂದಿನ ಎರಡು ವಾರಗಳಲ್ಲಿ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ. ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಮೋರಾಕ್ಕೋಗೆ ತೆರಳಲಿದೆ" ಎಂದು ಮೂಲಗಳು ತಿಳಿಸಿವೆ.
"ರಜನಿಕಾಂತ್ ಮಾರ್ಚ್ ೩೦ ರಂದು ದೆಹಲಿ ಚಿತ್ರೀಕರಣಕ್ಕಾಗಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ" ಎಂದು ಕೂಡ ಮೂಲಗಳು ತಿಳಿಸಿವೆ.
ಶಂಕರ್ ನಿರ್ದೇಶನದ ಈ ಸಿನೆಮಾದಲ್ಲಿ ಆಮಿ ಜಾಕ್ಸನ್ ನಾಯಕನಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


