ಬಾಲಿವುಡ್

ಯರವಾಡ ಜೈಲಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಸಂಜಯ್ ದತ್

1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದಿರುವ ಬಾಲಿವುಡ್ ನಟ ಸಂಜಯ್ ದತ್ ಪುಣೆಯ ಯಕವಾಡ ಜೈಲಿನ ತಮ್ಮ ...

ಯರವಾಡ ಜೈಲಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಸಂಜಯ್ ದತ್
ಸಂಜಯ್ ದತ್
Published On :

ಮುಂಬೈ: 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದಿರುವ ಬಾಲಿವುಡ್ ನಟ ಸಂಜಯ್ ದತ್ ಪುಣೆಯ ಯಕವಾಡ ಜೈಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕಳೆದ 23 ವರ್ಷಗಳಿಂದ ಜೈಲಿನ ಒಳಗೆ, ಹೊರಗೆ ಇದ್ದು ಅನೇಕ ಅನುಭವಗಳನ್ನು ಪಡೆದಿದ್ದೇನೆ, ನಾನು ಜೈಲುವಾಸ ಅನುಭವಿಸಿದ್ದಕ್ಕೆ ನನಗೆ ವಿಷಾಧವಿಲ್ಲ ಎಂದು ಹೇಳಿದ್ದಾರೆ
ಸ್ವತಂತ್ರವಾಗಿ  ಅಲೆಡಾಡಿಕೊಂಡಿದ್ದ ದತ್‌, ಜೈಲಿನಲ್ಲಿ ಏಕಾಂಗಿಯಾಗಿ ಕಾಲಕಳೆಯುತ್ತಿದ್ದರಂತೆ.

ಜೈಲಿನಲ್ಲಿ ಅನೇಕ ನೀತಿ-ನಿಯಮ ಹಾಗೂ ಕಟ್ಟುಪಾಡುಗಳಿಂದ ಬೇಸತ್ತು ಹೋಗಿದ್ದರಂತೆ. ಜೈಲಿನಲ್ಲಿ ಕಳೆದಿರುವ 5 ವರ್ಷಗಳು ತಮ್ಮನ್ನು  ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿಸಿತ್ತಂತೆ.

ಜೈಲೂಟದ ಬಗ್ಗೆ ಮಾತನಾಡಿರುವ ಸಂಜಯ್  ಆಹಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.  ಜೈಲೂಟ ಕೆಟ್ಟದಾಗಿದ್ದು, ಸೇವಿಸಲು ಆಗುತ್ತಿರಲಿಲ್ಲ ಎಂಬ ಕಟು ಸತ್ಯ ಹೊರಹಾಕಿದ್ದಾರೆ.
ಜೈಲರ್‌ಗಳು ಸಾಮಾನ್ಯ ಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅಲ್ಲಿನ ನಿರ್ಬಂಧಗಳಿಗೆ ನಾನು ರೋಸಿ ಹೋಗಿದ್ದೆ ಎಂದು ಹೇಳಿದ್ದಾರೆ.

ಜೈಲಿನಲ್ಲಿ ಕಳೆದ 5 ವರ್ಷಗಳಲ್ಲಿ ನನಗೆ ಯಾವುದೇ ವಿಐಪಿ ಸವಲತ್ತು ನೀಡಿಲ್ಲ. ನನ್ನನ್ನು  ಸಾಮಾನ್ಯ ಕೈದಿಗಳಂತೆ ನಡೆಸಿಕೊಳ್ಳುತ್ತಿದ್ದರು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.