'ನೀರ್ಜಾ' ಮುತ್ತಿನಂತಹ ಸಿನೆಮಾ: ರಣವೀರ್ ಸಿಂಗ್
ಸೋನಮ್ ಕಪೂರ್ ಅಭಿನಯದ 'ನೀರ್ಜಾ' ಸಿನೆಮಾವನ್ನು ನೋಡಿ ಮನಸಾರೆ ಹೊಗಳಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್.

ನವದೆಹಲಿ: ಸೋನಮ್ ಕಪೂರ್ ಅಭಿನಯದ 'ನೀರ್ಜಾ' ಸಿನೆಮಾವನ್ನು ನೋಡಿ ಮನಸಾರೆ ಹೊಗಳಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್.
ಸಿನೆಮಾ ನೋಡಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ೩೦ ವರ್ಷದ ನಟ "ಪುಷ್ಪಾ, ನನಗೆ ಕಣ್ಣೀರೆಂದರೆ ಆಗುವುದಿಲ್ಲ.. ಈಗಷ್ಟೆ 'ನೀರ್ಜಾ' ನೋಡಿದೆ.. ಅಧ್ಬುತವಾಗಾಗಿತ್ತು!! ಧನ್ಯವಾದಗಳು.. ಮುತ್ತಿನಂತಹ ಸಿನೆಮಾ" ಎಂದುದ್ದಾರೆ.
ರಣವೀರ್ ಅಷ್ಟೇ ಅಲ್ಲದೆ ಬಾಲಿವುಡ್ ತಾರೆಗಳಾದ ಬೊಮ್ಮನ್ ಇರಾನಿ, ಹುಮಾ ಖುರೇಶಿ ಮತ್ತಿ ನಿರ್ಮಾಪಕ ನಿಖಿಲ್ ಅದ್ವಾನಿ ಕೂಡ ಸಿನೆಮಾವನ್ನು ಪ್ರಶಂಸಿಸಿದ್ದಾರೆ.
ರಾಮ್ ಮದ್ವಾನಿ ಅವರ ನಿರ್ದೇಶನದ ಈ ಸಿನೆಮಾದ ನಟನೆಗಾಗಿ ದೇಶದ ಎಲ್ಲ ಭಾಗಗಳಿಂದ ಜನರು ಸೋನಮ್ ಕಪೂರ್ ಅವರಿಗೆ ಸಂದೇಶಗಳು, ಕರೆಗಳು ಮತ್ತು ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರಂತೆ.
ವಿಮರ್ಶಕರ ಮೆಚ್ಚುಗೆ ಪಡೆದಿರುವುದಲ್ಲದೆ, ಬಿಡುಗಡೆಯಾದ ಎರಡು ದಿನಗಳಲ್ಲಿ ೨೨ ಕೋಟಿ ಗಳಿಕೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದೆ.
ಶಬನ ಆಜ್ನಿ ಮತ್ತು ರಾಮ ಭಾನೋಟ್ ಕೂಡ ನಟಿಸಿರುವ ಈ ಚಿತ್ರ ಫೆಬ್ರವರಿ ೧೯ ರಂದು ಬಿಡುಗಡೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


