ಬಾಲಿವುಡ್

ಜಿಯಾಖಾನ್ ಸಾವು ಆತ್ಮಹತ್ಯೆ, ತನಿಖೆಯ ಅಗತ್ಯವಿಲ್ಲ: ಸಿಬಿಐ

ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಾಗಿದ್ದು, ಈ ಸಂಬಂಧ ತನಿಖೆಯ ಅಶ್ಯಕತೆಯಿಲ್ಲ ಎಂದು ಕೇಂದ್ರೀಯ ತನಿಖಾ ದಳ ಬಾಂಬೆ ಹೈಕೊರ್ಟ್​ಗೆ ಹೇಳಿಕೆ..

ಜಿಯಾಖಾನ್ ಸಾವು ಆತ್ಮಹತ್ಯೆ, ತನಿಖೆಯ ಅಗತ್ಯವಿಲ್ಲ: ಸಿಬಿಐ
ಜಿಯಾಖಾನ್
Published On :

ನವದೆಹಲಿ: ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಾಗಿದ್ದು, ಈ ಸಂಬಂಧ ಮತ್ತೆ ತನಿಖೆಯ ಅಶ್ಯಕತೆಯಿಲ್ಲ ಎಂದು ಕೇಂದ್ರೀಯ ತನಿಖಾ ದಳ ಬಾಂಬೆ ಹೈಕೊರ್ಟ್​ಗೆ ಹೇಳಿಕೆ ನೀಡಿದೆ.

ಸಾಕ್ಷ್ಯಾಧಾರಗಳ ಪ್ರಕಾರ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನೇಮಿಸಬೇಕು ಹಾಗೂ ಸಿಬಿಐ ತಂಡ ತನಿಖೆಯಲ್ಲಿ ಎಫ್​ಬಿಐ ಸಹಾಯ ಪಡೆಯಬೇಕು ಎಂದು ಜಿಯಾ ಖಾನ್ ಅವರ ತಾಯಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರೀಯ ತನಿಖಾ ದಳ ಈ ಹೇಳಿಕೆ ನೀಡಿದೆ.

ಜಿಯಾ ಖಾನ್ ಅವರು 2013ರಲ್ಲಿ ಸಂಶಯಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ತಮ್ಮದೇ ಅಪಾರ್ಟ್​ಮೆಂಟ್​ನಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಪ್ರಾಥಮಿಕ ತನಿಖೆ ನಡೆದ ನಂತರ ಮರು ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿತ್ತು.

ಆತ್ಮಹತ್ಯೆಗೆ ಮುಂಚೆ ಜಿಯಾ ಖಾನ್ ಅವರ ಗೆಳೆಯ ಸೂರಜ್ ಪಾಂಚೋಲಿ ಕಳುಹಿಸಿದ್ದ ಸಂದೇಶವನ್ನು ಅಳಿಸಿಹಾಕಿದ್ದಾನೆ ಎಂದು ಸಿಬಿಐ ಹೇಳಿದೆ. ಈ ಹಿಂದೆ ಡಿಸೆಂಬರ್​ನಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಸಂದೇಶಗಳನ್ನು ಅಳಿಸಿ ಹಾಕುವಂತೆ ಸೂರಜ್​ಗೆ ಆತನ ತಂದೆ ಒತ್ತಾಯಿಸಿದ್ದರು ಎಂದು ಹೇಳಲಾಗಿತ್ತು.

ಜಿಯಾಖಾನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 35 ನಿಮಿಷಗಳ ಕಾಲ ಅಪಾರ್ಟ್ ಮೆಂಟ್ ನಲ್ಲಿದ್ದಳು, ಹೀಗಾಗಿ ಆಕೆಗೆ ಡೆತ್ ನೋಟ್ ಬರೆಯುವಷ್ಟು ಸಮಯ ಸಿಕ್ಕಿತ್ತು, ಫ್ಲ್ಯಾಟ್ ನಲ್ಲಿ ಸಿಕ್ಕ ಡೆತ್ ನೋಟ್ ಜಿಯಾ ಖಾನ್ ಬರೆದಿರುವುದು ಎಂದು ಸಿಬಿಐ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.