ಬಾಲಿವುಡ್

ಗಗನಯಾತ್ರಿ ರಾಕೇಶ್ ಶರ್ಮ ಜೀವನಾಧರಿತ ಚಿತ್ರದಲ್ಲಿ ಆಮೀರ್ ಖಾನ್ ನಟನೆ

ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಜೀವನಕಥೆ ಬಾಲಿವುಡ್ ನಲ್ಲಿ ಸಿನಿಮಾವಾಗುತ್ತಿದ್ದು, ಇದರಲ್ಲಿ ಆಮೀರ್ ಖಾನ್ ಅವರು ರಾಕೇಶ್ ಶರ್ಮಾ ಅವರ ...

ಗಗನಯಾತ್ರಿ ರಾಕೇಶ್ ಶರ್ಮ ಜೀವನಾಧರಿತ ಚಿತ್ರದಲ್ಲಿ ಆಮೀರ್ ಖಾನ್  ನಟನೆ
ಆಮೀರ್ ಖಾನ್
Published On :

ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ಯಾವುದೇ ಸಿನಿಮಾ ಮಾಡಲಿ ಒಂದೊಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಅವರ ಪಾತ್ರ ಭಿನ್ನವಾಗಿರುತ್ತೆ. ಅಮೀರ್ ಖಾನ್ ಅಂತಹದ್ದೇ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ದಾಂಗಲ್ ಸಿನಿಮಾದಲ್ಲಿ ಅಮೀರ್ ಖಾನ್  ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಆಮೀರ್ ಖಾನ್ ಅವರು ತಮ್ಮ ಮುಂದಿನ ಸಿನಿಮಾಕ್ಕೆ ರೆಡಿಯಾಗುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಅವರು ಗಗನಯಾತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಜೀವನಕಥೆ ಬಾಲಿವುಡ್ ನಲ್ಲಿ ಸಿನಿಮಾವಾಗುತ್ತಿದ್ದು, ಇದರಲ್ಲಿ ಆಮೀರ್ ಖಾನ್ ಅವರು ರಾಕೇಶ್ ಶರ್ಮಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಆಮೀರ್ ಖಾನ್ ಅವರು ಸದ್ಯ ದಾಂಗಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಅವರು ರಾಕೇಶ್ ಶರ್ಮಾ ಅವರ ಜೀವನ ಕಥಾಧಾರಿತ ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ. ದಾಂಗಲ್ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.