ಬಾಲಿವುಡ್

ಉಡ್ತಾ ಪಂಜಾಬ್ ನಷ್ಟು ಪ್ರಾಮಾಣಿಕ ಚಿತ್ರ ಮತ್ತೊಂದಿಲ್ಲ: ಅನುರಾಗ್ ಕಶ್ಯಪ್

ಉಡ್ತಾ ಪಂಜಾಬ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್, ಉಡ್ತಾ ಪಂಜಾಬ್, ಪಂಜಾಬ್ ನ ಪರಿಸ್ಥಿತಿಯ ನೈಜ ಚಿತ್ರಣ ಎಂದು ಹೇಳಿದ್ದಾರೆ.

ಉಡ್ತಾ ಪಂಜಾಬ್ ನಷ್ಟು ಪ್ರಾಮಾಣಿಕ ಚಿತ್ರ ಮತ್ತೊಂದಿಲ್ಲ: ಅನುರಾಗ್ ಕಶ್ಯಪ್
Published On :

ಪಂಜಾಬ್ ಎದುರಿಸುತ್ತಿರುವ ಮಾದಕ(ಡ್ರಗ್) ವ್ಯಸನ ಸಮಸ್ಯೆಯನ್ನು ಉಡ್ತಾ ಪಂಜಾಬ್ ಮೂಲಕ ತೆರೆ ಮೇಲೆ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್, ಉಡ್ತಾ ಪಂಜಾಬ್, ಪಂಜಾಬ್ ನ ಪರಿಸ್ಥಿತಿಯ ನೈಜ ಚಿತ್ರಣ ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ಪಂಜಾಬ್ ನ್ನು ಉಲ್ಲೇಖಿಸಿರುವುದನ್ನು ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಚಿತ್ರ ನಿರ್ದೇಶಕರಿಗೆ ಸೂಚನೆ ನೀಡಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿದ್ದು, ಉಡ್ತಾ ಪಂಜಾಬ್ ಗಿಂತ ಪ್ರಾಮಾಣಿಕವಾದ ಚಿತ್ರ ಮತ್ತೊಂದಿಲ್ಲ, ಉಡ್ತಾ ಪಂಜಾಬ್ ನ್ನು ವಿರೋಧಿಸುವವರು ಡ್ರಗ್ ನ್ನು ಉತ್ತೇಜಿಸುವ ಅಪರಾಧಿ ಭಾವನೆ ಹೊಂದಿದ್ದಾರೆ ಎಂಡು ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಡ್ರಗ್ ಸಮಸ್ಯೆ ಉಲ್ಬಣಿಸತೊಡಗಿರುವ ಹಿನ್ನೆಲೆಯಲ್ಲಿ ಉಡ್ತಾ ಪಂಜಾಬ್ ಚಿತ್ರದಲ್ಲಿ ಪಂಜಾಬ್ ನ ಉಲ್ಲೇಖವನ್ನು ತೆಗೆದುಹಾಕುವುದಕ್ಕೆ ರಾಜಕೀಯ ಕಾರಣಗಳೂ ಇವೆ ಎಂಬ ಆರೋಪ ಕೇಳಿಬಂದಿದೆ. ಉಡ್ತಾ ಪಂಜಾಬ್ ಚಿತ್ರದಲ್ಲಿ ಶಾಹಿದ್ ಕಪೂರ್, ಅಲಿಯಾ ಭಟ್, ಕರೀನಾ ಕಪೂರ್, ದಲ್ಜಿತ್ ದೊಸಾಂಝ್ಹಾ, ಉಡ್ತಾ ಪಂಜಾಬ್ ಚಿತ್ರದಲ್ಲಿ ಅಭಿನಯಿಸಿದ್ದು, ಪಂಜಾಬ್ ನಲ್ಲಿ ಯುವಕರು ಹೇಗೆ ಮಾದಕ ವ್ಯಸನಿಗಳಾಗಿದ್ದಾರೆ ಎಂಬುದನ್ನು ಚಿತ್ರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.