ಪತಿಯ ಸಿನೆಮಾಗಳಲ್ಲಿ ನಟಿಸುವುದಿಲ್ಲವೇಕೆ ಎಂಬುದಕ್ಕೆ ಕಾರಣ ನೀಡಿದ ವಿದ್ಯಾ ಬಾಲನ್
ಬಾಲಿವುಡ್ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್, ಆರೋಗ್ಯಕರ ಮದುವೆ ಸಂಬಂಧ ಉಳಿಸಿಕೊಳ್ಳುವುದಕ್ಕೆ

ಮುಂಬೈ: ಬಾಲಿವುಡ್ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್, ಆರೋಗ್ಯಕರ ಮದುವೆ ಸಂಬಂಧ ಉಳಿಸಿಕೊಳ್ಳುವುದಕ್ಕೆ ಪತಿಯ ಸಿನೆಮಾಗಳಲ್ಲಿ ಕೆಲಸ ಮಾಡದೇ ಇರುವುದು ಒಳ್ಳೆಯದು ಎಂದಿದ್ದಾರೆ
ತಮ್ಮ ಪತಿಯ ಹೊತೆಗೆ ಕೆಲಸ ಮಾಡುವುದಿಲ್ಲವೇಕೆ ಎಂಬ ಪ್ರಶ್ನೆಗೆ "ನಮ್ಮ ಮದುವೆಯ ಆರೋಗ್ಯಕರ ಸಂಬಂಧಕ್ಕಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡದಿರಲು ಪ್ರಯತ್ನಿಸುತ್ತಿದ್ದೇವೆ" ಎಂದಿದ್ದಾರೆ.
"ಈ ಕಾರಣದಿಂದ ಕೆಲವೊಮ್ಮೆ ಒಳ್ಳೆಯ ಸಿನೆಮಾಗಳು ಕೈತಪ್ಪಿ ಹೋಗುತ್ತವೆ ಆದರೆ ಇದು ಅವಶ್ಯಕ ತ್ಯಾಗ. ನಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನವನ್ನು ಬೆರೆಸಲು ನನಗೆ ಇಷ್ಟವಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
"ಯಾರಾದರು ಜೋಡಿಗಳು ಒಟ್ಟಿಗೆ ಕೆಲಸ ಮಾಡಿದಾಗ ನನಗೆ ಅದ್ಭುತ ಎನಿಸುತ್ತದೆ. ನಾವಿಬ್ಬರೂ ಕೆಲಸದ ಬಗೆಗೆ ಒಟ್ಟಿಗೆ ಚರ್ಚಿಸುತ್ತೇವೆ ಆದರೆ ಒಟ್ಟಿಗೇ ಕೆಲಸ ಮಾಡದೆ ಇರುವುದು ನಮ್ಮ ಮದುವೆ ಸಂಬಂಧಕ್ಕೆ ಒಳ್ಳೆಯದು" ಎಂದಿದ್ದಾರೆ ವಿದ್ಯಾ.
ವಿದ್ಯಾ ತಮ್ಮ ಮುಂದಿನ ಚಿತ್ರ '' ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಿಭು ದಾಸಗುಪ್ತ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನವಾಜುದ್ದೀನ್ ಸಿದ್ಧಿಕಿ ಮ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


