ಶಿಲ್ಪಾ ಶೆಟ್ಟಿಯಿಂದ ದೂರಾವಾಗ್ತಿಲ್ಲ: ದಾಂಪತ್ಯ ಸಮರ್ಥಿಸಿಕೊಂಡ ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ದೂರವಾಗುತ್ತಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬಂದಿತ್ತು. ಈ ಎಲ್ಲಾ ...

ಮುಂಬಯಿ: ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ದೂರವಾಗುತ್ತಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬಂದಿತ್ತು. ಈ ಎಲ್ಲಾ ಊಹಾಪೋಹಾಗಳಿಗೂ ರಾಜ್ ಕುಂದ್ರಾ ಅವರೇ ಬ್ರೇಕ್ ಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ ಕುಂದ್ರಾ ಅವರು ಹಾಗೂ ಶಿಲ್ಪಾ ಶೆಟ್ಟಿ ಅವರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದ್ದವು. ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿ ಅವರ ಮನೆಯಿಂದ ದೂರವಾಗಿ ಬೇರೆಯೇ ವಾಸವಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಅಲ್ಲದೇ ರಾಜ್ ಕುಂದ್ರಾ ಅವರು ತಮ್ಮ ಆಫೀಸ್ ಗೆ ಶಿಫ್ಟ್ ಆಗಿದ್ದಾರೆ ಅಂತಾ ಹೇಳಲಾಗುತ್ತಿತ್ತು.
ಆದ್ರೆ ಇದೀಗ ರಾಜ್ ಕುಂದ್ರಾ ಅವರು ಈಗ ಟ್ವೀಟ್ ಮಾಡಿದ್ದು ಇದೆಲ್ಲಾ ಸುಳ್ಳು ಅಂತಾ ಹೇಳಿದ್ದಾರೆ. ನಾನು ಪ್ರತಿದಿನ ಆಫೀಸ್ ನಿಂದ ಮನೆಗೆ ಬರೋವಾಗ ಮಧ್ಯರಾತ್ರಿ 1-30 ಆಗುತ್ತೆ. ಕೆಲವರು ನಾವಿಬ್ಬರು ದೂರವಾಗುತ್ತಿದ್ದೇವೆ ಅನ್ನೋ ಸುದ್ದಿಯನ್ನು ಹಬ್ಬಿಸಿದ್ದಾರೆ ಅಂತಾ ರಾಜ್ ಕುಂದ್ರಾ ಅವರು ಹೇಳಿದ್ದಾರೆ.
ಸದ್ಯ ರಾಜ್ ಕುಂದ್ರಾ ಅವರೇ ಸುದ್ದಿಗೆ ಬ್ರೇಕ್ ಹಾಕಿರೋದರಿಂದ ಬಾಲಿವುಡ್ ಮಂದಿ ತಣ್ಣಗಾಗಿದ್ದಾರೆ. ಆದ್ರೆ ಬಾಲಿವುಡ್ ನಲ್ಲಿ ಈ ರೀತಿ ಸಾಲು ಸಾಲು ಬ್ರೇಕ್ ಅಪ್ ಗಳ ಸುದ್ದಿಯೇಕೆ ಕೇಳಿ ಬರುತ್ತಿದೆ ಅಂತಾ ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


