ಮಹಿಳೆಗೆ ಕಿರುಕುಳ ಪ್ರಕರಣ; ಗಾಯಕ ಮಿಕಾ ಸಿಂಗ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್!
ಇತ್ತೀಚೆಗಷ್ಟೇ ಮಾಡೆಲ್ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಬಾಲಿವುಡ್ ನ ಖ್ಯಾತ ಗಾಯಕ ಮಿಕಾ ಸಿಂಗ್ ಗೆ ನಟಿ ರಾಖಿ ಸಾವಂತ್ ಬೆಂಬಲ ನೀಡಿದ್ದಾರೆ.

ಮುಂಬೈ: ಇತ್ತೀಚೆಗಷ್ಟೇ ಮಾಡೆಲ್ ಒಬ್ಬರಿಗೆ ಕಿರುಕುಳ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಬಾಲಿವುಡ್ ನ ಖ್ಯಾತ ಗಾಯಕ ಮಿಕಾ ಸಿಂಗ್ ಗೆ ನಟಿ ರಾಖಿ ಸಾವಂತ್ ಬೆಂಬಲ ನೀಡಿದ್ದಾರೆ.
ಕಿರುಕುಳ ಪ್ರಕರಣದಲ್ಲಿ ಮಿಕಾ ಸಿಂಗ್ ಅವರ ಯಾವುದೇ ತಪ್ಪಿಲ್ಲ. ವಿನಾಕಾರಣ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಿಜ ಹೇಳಬೇಕು ಎಂದು ಎಂದರೆ ಆ ಮಾಡೆಲ್ ನಿಂದಲೇ ನಿತ್ಯ ಮಿಕಾ ಸಿಂಗ್ ಅಶ್ಲೀಲ ಮೆಸೇಜ್ ಗಳು ಬರುತ್ತಿದ್ದವು ಎಂದು ರಾಖಿ ಆರೋಪಿಸಿದ್ದಾರೆ. ಮುಂಬೈನಲ್ಲಿ ಮಾತನಾಡಿದ ರಾಖಿ ಸಾವಂತ್, "ನಾನು ಮಿಕಾ ಸಿಂಗ್ ರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಲ್ಲದೆ ನನಗೆ ತಿಳಿದಂತೆ ಮಿಕಾ ಸಿಂಗ್ ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. ನನ್ನ ಮತ್ತು ಮಿಕಾ ಸಿಂಗ್ ಪರಿಚಯವಾದ ಬಳಿಕ ಇದೇ ಮೊದಲ ಬಾರಿಗೆ ನಾನು ಅವರ ಕಣ್ಣಂಚ್ಚಲ್ಲಿ ನೀರು ನೋಡಿದ್ದೇನೆ. ಅವರ ಮುಖಭಾವದಿಂದ ತಿಳಿಯುತ್ತದೆ ಅವರು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
"ಚಿತ್ರರಂಗದಲ್ಲಿ ನಾವು ತುಂಬಾ ಕಷ್ಟಪಟ್ಟು ಮೇಲಕ್ಕೆ ಬರುತ್ತೇವೆ. ಆದರೆ ಯಾರೋ ಕೆಲವರು ಇಂಥಹ ಸುಳ್ಳಿನ ಆರೋಪಗಳನ್ನು ಮಾಡುವ ಮೂಲಕ ನಮ್ಮ ಕಷ್ಟವನ್ನು ಹಾಳುಮಾಡಲು ಯತ್ನಿಸುತ್ತಾರೆ. ಸುಖಾ ಸುಮನ್ಮೆ ವಿವಾದ ಸೃಷ್ಟಿಸಿ ಅವರ ಜೀವನವನ್ನೇ ಹಾಳು ಮಾಡಲು ಯತ್ನಿಸುತ್ತಾರೆ. ಮಿಕಾ ಸಿಂಗ್ ಅವರ ವಿಚಾರದಲ್ಲೂ ಆಗಿರುವುದು ಇದೇ. ನಿಜ ಹೇಳಬೇಕು ಎಂದರೆ ಮಾಡೆಲ್ ಯುವತಿಯೇ ಮಿಕಾ ಸಿಂಗ್ ಅವರಿಗೆ ಕಿರುಕುಳ ನೀಡಿದ್ದು, ನಿತ್ಯ ಅವರ ಮೊಬೈಲ್ ಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಳು. ಈ ಬಗ್ಗೆ ನನ್ನ ಬಳಿ ಪುರಾವೆಗಳಿದ್ದು, ನಾನು ಸಾಕಷ್ಟು ಬಾರಿ ಆ ನಂಬರ್ ಅನ್ನು ಬ್ಲಾಕ್ ಮಾಡುವಂತೆ ಅವರ ಬಳಿ ಹೇಳಿದ್ದೆ, ಅದರೆ ಎಷ್ಟು ಮಂದಿಯ ನಂಬರ್ ಗಳನ್ನು ಬ್ಲಾಕ್ ಮಾಡಲು ಸಾಧ್ಯ. ಇದನ್ನೇ ಅಸ್ತರವಾಗಿಸಿಕೊಂಡ ಆ ಹುಡುಗಿ ಮಿಕಾ ಸಿಂಗ್ ಅವರ ಮನೆಗೂ ಹೋಗಿದ್ದಳಂತೆ. ಈ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಆ ಹುಡುಗಿ ಮಿಕಾ ಸಿಂಗ್ ಅವರಿಗೆ ಪರಿಚಿತಳಾಗಿದ್ದಾಳೆ. ಬಳಿಕ ಆ ಹುಡುಗಿ ಮಿಕಾಸಿಂಗ್ ಬೆದರಿಕೆ ಹಾಕಲು ಆರಂಭಿಸಿದ್ದು, ಮಿಕಾ ಸಿಂಗ್ ಹಣ ಪಡೆಯಲು ಮುಂದಾಗಿದ್ದಾಳೆ. ಇದಕ್ಕೆ ಮಿಕಾ ಸಿಂಗ್ ಅವರು ಸೊಪ್ಪು ಹಾಕದಿದ್ದಾಗ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾಳೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


