ಬಾಲಿವುಡ್ ನಟ 'ಲಗಾನ್' ಖ್ಯಾತಿಯ ರಾಜೇಶ್ ವಿವೇಕ್ ವಿಧಿವಶ
ಬಾಲಿವುಡ್ ಸೂಪರ್ ಹಿಟ್ ಚಿತ್ರ ಲಗಾನ್ ಚಿತ್ರದಲ್ಲಿ ಗುರಾನ್ ಪಾತ್ರಧಾರಿ ರಾಜೇಶ್ ವಿವೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ...

ಮುಂಬೈ: ಬಾಲಿವುಡ್ ಸೂಪರ್ ಹಿಟ್ ಚಿತ್ರ ಲಗಾನ್ ಚಿತ್ರದಲ್ಲಿ ಗುರಾನ್ ಪಾತ್ರಧಾರಿ ರಾಜೇಶ್ ವಿವೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಾಬಾದ್ ನಲ್ಲಿ 66 ವರ್ಷದ ರಾಜೇಶ್ ವಿವೇಕ್ ಶೂಟಿಂಗ್ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಉತ್ತರಪ್ರದೇಶ ಜೈನಪುರಿ ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿ ಕಲಾವಿದರಾಗಿ ಅವರು ಅಧ್ಯಯನ ಮಾಡಿದ್ದರು. ಶಾರುಖ್ ಖಾನ್ ಅಭಿನಯದ ಸ್ವದೇಶ್, ಬೈಂಡಿಟ್ ಕ್ವೀನ್ ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ನಟನೆ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದರು.
ದಕ್ಷಿಣ ಭಾರತದ ಚಲನಚಿತ್ರಕ್ಕೆ ಸಂಬಂಧಿಸಿದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಅವರು ಸಾವನ್ನಪ್ಪಿರುವುದಾಗಿ ಅವರ ಸಹೋದರ ವಿವೇಕ್ ಶರ್ಮಾ ಮಾಹಿತಿ ನೀಡಿದ್ದಾರೆ. ರಾಜೇಶ್ ವಿವೇಕ್ 1978ರಲ್ಲಿ ಶ್ಯಾಮ್ ಬೆನಗಲ್ ರವರ "ಜೂನೂನ್" ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ನಂತರ ಟಿವಿಯಲ್ಲಿ ಮೂಡಿಬರುತ್ತಿದ್ದ ಮಹಾಭಾರತದಲ್ಲೂ ಅವರು ನಟನೆ ಮಾಡಿದ್ದರು. ಅಗ್ನಿಪಥ್, ರಾಮ್ ತೇರಿ ಗಂಗಾ ಮೈಲಿ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟನೆ ಮಾಡಿ ಗಮನ ಸೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


