'ತಮಾಶಾ' ನಿರ್ಮಾಪಕರಿಗೆ ೧೫ ಕೋಟಿ ಹಿಂದಿರುಗಿಸಿದ ರಣಬೀರ್ ಮತ್ತು ದೀಪಿಕಾ
ಮಿಸ್ ಮಾಲಿನಿ.ಕಾಂನ ವರದಿಯ ಪ್ರಕಾರ, 'ತಮಾಶಾ' ಚಲನಚಿತ್ರದ ನಟರಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ತಾವು ಪಡೆದ ಸಂಭಾವನೆಯನ್ನು ನಿರ್ಮಾಪಕರಿಗೆ

ಮಿಸ್ ಮಾಲಿನಿ.ಕಾಂನ ವರದಿಯ ಪ್ರಕಾರ, 'ತಮಾಶಾ' ಚಲನಚಿತ್ರದ ನಟರಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ತಾವು ಪಡೆದ ಸಂಭಾವನೆಯನ್ನು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎಂದು ನಂಬಲಾಗಿದೆ.
ಈ ವರದಿಯ ಪ್ರಕಾರ ರಣಬೀರ್ ೧೦ ಕೋಟಿ ಮತ್ತು ದೀಪಿಕಾ ಪಡುಕೋಣೆ ೫ ಕೋಟಿ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.
'ತಮಾಶಾ' ವಿಮರ್ಶಕರಿಂದ ಒಳ್ಳೆಯ ವಿಮರ್ಶೆ ಗಳಿಸಿದರೂ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಗಳಿಕೆ ಕಾಣಲು ಸಿನೆಮಾ ವಿಫಲವಾಯಿತು. ಅತಿ ಹೆಚ್ಚು ಬಜೆಟ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸಾಮಾನ್ಯ ಗಳಿಕೆ ಕಂಡ ಸಿನೆಮಾಗಳಡಿ ಪಟ್ಟಿಯಾಯಿತು.
ನಿರ್ಮಾಪಕ ಸಾಜಿದ್ ನಾಡಿಯಡ್ವಾಲಾ ಮತ್ತು ಯು ಟಿ ವಿ ಸಂಸ್ಥೆಗೆ ಉಂಟಾಗಿರುವ ನಷ್ಟದಲ್ಲಿ ಒಂದು ಭಾಗವನ್ನು ಭರಿಸಿಕೊಡಲು ಈ ಜೋಡಿ ಮುಂದಾಗಿರುವುದು ಉದಾತ್ತ ನಡೆ ಎನ್ನಲಾಗಿದೆ.
ಈ ಹಿಂದ 'ಬಾಂಬೆ ವೆಲ್ವೆಟ್' ಸೋತಾಗ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ತಮ್ಮ ನಿರ್ಮಾಣ ವೆಚ್ಚವನ್ನು ಹಿಂದಿರುಗಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


